More

    VIDEO: ಏಟಿಗೆ ತಿರುಗೇಟು ನೀಡಿದ ದಲಿತ ಕುಟುಂಬ! ಕುದುರೆ ನೀಡದ ಗ್ರಾಮಸ್ಥರೇ ಕಣ್ ಕಣ್‌ ಬಿಡುವಂತೆ ಮಾಡಿದ ವರನ ಅಮ್ಮ

    ಜೈಪುರ (ರಾಜಸ್ತಾನ): ಜಾತಿ ಪದ್ಧತಿಯ ವಿಷ ಬೀಜ ಇನ್ನೂ ಹಲವು ಕಡೆ ಜೀವಂತವಾಗಿಯೇ ಇದೆ. ಅದರಲ್ಲಿಯೂ ದಲಿತ ಕುಟುಂಬದವರನ್ನು ತೀರಾ ಕೆಳಮಟ್ಟದಲ್ಲಿ ನೋಡುವ ಅನಿಷ್ಠ ಪದ್ಧತಿಗೆ ಇನ್ನೂ ಮುಕ್ತಿಸಿಕ್ಕಿಲ್ಲ. ಇದರ ಮಧ್ಯೆಯೇ ರಾಜಸ್ಥಾನದ ಜೈಪುರದ ಬಾರ್ಮರ್ ಗ್ರಾಮದಲ್ಲೊಂದು ಮೇಲ್ಜಾತಿಯರು ಎಂದುಕೊಂಡವರೆಲ್ಲಾ ತಲೆ ತಿರುಗುವಂತೆ ಮಾಡಿದೆ ಒಂದು ದಲಿತ ಕುಟುಂಬ.

    ನೂತನವಾಗಿ ಮದುವೆಯಾದ ಜೋಡಿಯೊಂದು ಹೆಲಿಕಾಪ್ಟರ್‌ನಲ್ಲಿ ಗ್ರಾಮಕ್ಕೆ ಬಂದು ಅಚ್ಚರಿಗೊಳಿಸಿರುವ ಘಟನೆ ಇದಾಗಿದೆ. ಇಲ್ಲಿದ ದಲಿತ ಕುಟುಂಬವೊಂದು ಈ ರೀತಿಯಾಗಿ ವಿಭಿನ್ನವಾಗಿ ಮದುವೆಯ ನಂತರದ ಪ್ರಕ್ರಿಯೆ ನಡೆಸಿದ್ದು, ಇದರ ವಿಡಿಯೋ ಭಾರಿ ವೈರಲ್‌ ಆಗಿದೆ.

    ಇಲ್ಲಿ ಕುದುರೆಯ ಮೇಲೆ ವರರು ಬರುವುದು ಸಾಮಾನ್ಯ. ಆದರೆ ಇವರದ್ದು ದಲಿತ ಕುಟುಂಬ ಆಗಿದ್ದರಿಂದ ಕುದುರೆ ಏರಿದರೆ ಥಳಿಸುವುದಾಗಿ ಗ್ರಾಮಸ್ಥರು ಬೆದರಿಕೆ ಒಡ್ಡಿದ್ದರಿಂದ ವರನ ತಾಯಿ ಉಪಾಯ ಮಾಡಿ, ವಿಭಿನ್ನವಾಗಿ ವಧು-ವರರನ್ನು ಬರಮಾಡಿಕೊಂಡಿದ್ದಾರೆ. ಇದನ್ನು ನೋಡಿ ಬೆದರಿಕೆ ಒಡ್ಡಿದ್ದವರು ತಲೆಸುತ್ತಿ ಬೀಳುವಂತೆ ಆದದ್ದು ಸುಳ್ಳಲ್ಲ!

    ದಿಯಾ ಮತ್ತು ತರುಣ್ ಮೇಘವಾಲ್ ಅವರ ವಿವಾಹದ ಘಟನೆ ಇದಾಗಿದೆ. ಕುದುರೆ ನೀಡಿಲ್ಲ ಎನ್ನುವ ಕಾರಣಕ್ಕೆ ನೂತನ ವಧುವನ್ನು ವಿಭಿನ್ನವಾಗಿ ಸ್ವಾಗತಿಸುವ ನಿಟ್ಟಿನಲ್ಲಿ ಈ ಕುಟುಂಬ ಹೆಲಿಕಾಪ್ಟರ್‌ ಒಂದನ್ನು ಬಾಡಿಗೆಗೆ ಪಡೆದಿತ್ತು. ಮದುವೆಯೆಲ್ಲಾ ಮುಗಿದ ಬಳಿಕ ವಧುವನ್ನು ಮನೆತುಂಬಿಸಿಕೊಳ್ಳುವ ಕಾರ್ಯಕ್ಕೆ ಹೆಲಿಕಾಪ್ಟರ್‌ ಬಳಕೆ ಮಾಡಲಾಗಿದೆ.

    ಗ್ರಾಮಕ್ಕೆ ಹೆಲಿಕಾಪ್ಟರ್‌ ಇಳಿಯುತ್ತಿದ್ದಂತೆಯೇ ಅದನ್ನು ನೋಡಲು ಗ್ರಾಮಸ್ಥರು ದೌಡಾಯಿಸಿ ಬಂದಿದ್ದರು. ಅದರಿಂದ ನೂತನ ವಧು-ವರರು ಕೆಳಕ್ಕೆ ಇಳಿಯುತ್ತಿದ್ದಂತೆಯೇ ಎಲ್ಲರೂ ಅಚ್ಚರಿ ಪಟ್ಟುಕೊಂಡರು. ಇದರ ಸುದ್ದಿಯಾಗುತ್ತಿದ್ದಂತೆಯೇ ಅಕ್ಕ ಪಕ್ಕದ ಗ್ರಾಮಸ್ಥರೂ ನೋಡಲು ಮುಗಿಬಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರೇ ಬರಬೇಕಾಯಿತು, ಗುಂಪನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟರು.

    ಒಟ್ಟಿನಲ್ಲಿ ಹೊಸ ವಧುವಿನ ಎಂಟ್ರಿ ನೂತನವಾಗಿ ನಡೆಯಿತು. ಹೆಲಿಕಾಪ್ಟರ್‌ನಿಂದ ಇಳಿದ ನಂತರ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿ ಗೃಹ ಪ್ರವೇಶ ಮಾಡಿಸಿದರು. ಅಂದಹಾಗೆ ಈ ಹೆಲಿಕಾಪ್ಟರ್‌ಗೆ 1ಲಕ್ಷ ರೂಪಾಯಿ ಬಾಡಿಗೆ ನೀಡಿದ್ದಾರೆ.

    ವಿಡಿಯೋ ಇಲ್ಲಿದೆ ನೋಡಿ: (ಕೃಪೆ Pr Rajasthani)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts