More

    ಭೂಮಿ ಮಂಜೂರು ಮಾಡದಿದ್ದರೆ ಚುನಾವಣೆ ಬಹಿಷ್ಕಾರ

    ರಾಯಚೂರು: ದೇವದುರ್ಗ ತಾಲೂಕಿನ ಮಸೀದಿಪುರ ಗ್ರಾಮದಲ್ಲಿ ದಲಿತ ಕುಟುಂಬಗಳಿಗೆ ಭೂಮಿ ಮಂಜೂರು ಮಾಡದಿದ್ದಲ್ಲಿ ವಿಧಾನಸಭೆ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಶಾಂತಕುಮಾರ ಹೊನ್ನಟಗಿ ತಿಳಿಸಿದರು.

    ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಗ್ರಾಮದಲ್ಲಿ ದಲಿತ ಕುಟುಂಬಗಳು ವಾಸಿಸುವ ಜಾಗ ಮಳೆಗಾಲದಲ್ಲಿ ಜಲಾವೃತ್ತಗೊಂಡು ಸಮಸ್ಯೆಯಾಗುತ್ತಿದೆ. ಬೇರೆ ಜಮೀನು ಮಂಜೂರು ಮಾಡುವಂತೆ ಒತ್ತಾಯಿಸುತ್ತಿದ್ದರೂ ಜಿಲ್ಲಾಡಳಿತ ಸ್ಪಂದನೆ ನೀಡುತ್ತಿಲ್ಲ ಎಂದು ಆರೋಪಿಸಿದರು.

    ಈ ಹಿಂದೆ ಜಿಲ್ಲಾಧಿಕಾರಿ ಕಚೇರಿ ಮುಂದೆ ದಲಿತ ಕುಟುಂಬಗಳು ಪ್ರತಿಭಟನೆ ನಡೆಸಿ ಗ್ರಾಮದ ಸರ್ವೇ ನಂ.3ರಲ್ಲಿನ 14.24 ಎಕರೆ ಭೂಮಿ ಮಂಜೂರು ಮಾಡುವಂತೆ ಒತ್ತಾಯಿಸಲಾಗಿತ್ತು. ಆದರೆ ಕೆರೆ ಜಾಗವಾಗಿದ್ದರಿಂದ ಮಂಜೂರು ಮಾಡಲು ಬರುವುದಿಲ್ಲ ಎಂದು ಹೇಳಿದ್ದರು. ಕೆಲವರು ಆ ಜಾಗದಲ್ಲಿ ಗುಡಿಸಲು, ಶೆಡ್ ನಿರ್ಮಾಣ ಮಾಡಿರುವುದನ್ನು ಗಮನಕ್ಕೆ ತಂದಾಗ ತೆರವುಗೊಳಿಸಲು ಆದೇಶಿಸಿ, ಬೇರೆ ಜಾಗ ತೋರಿಸಿದರೆ ಮಂಜೂರು ಮಾಡುವ ಭರವಸೆ ನೀಡಿದ್ದರು. ಗಬ್ಬೂರು ಗ್ರಾಮದ ಸೀಮಾಂತರದಲ್ಲಿನ ಸರ್ವೇ ನಂ.506ರಲ್ಲಿ 2.6 ಎಕರೆ ಭೂಮಿ ಮಂಜೂರಾತಿಗೆ ತಹಸಿಲ್ ಕಚೇರಿ ಮೂಲಕ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪ್ರಸ್ತಾವನೆ ಕಳಿಸಿ ಐದು ತಿಂಗಳಾದರೂ ಕ್ರಮಕೈಗೊಳ್ಳದಿರುವುದರಿಂದ ವಿಧಾನಸಭೆ ಚುನಾವಣೆ ಬಹಿಷ್ಕರಿಸಲು ಹಾಗೂ ಹೋರಾಟ ಮುಂದುವರಿಸಲು ದಲಿತ ಕುಟುಂಬಗಳು ನಿರ್ಧರಿಸಿವೆ ಎಂದು ಶಾಂತಕುಮಾರ ಹೊನ್ನಟಗಿ ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಸಮಿತಿ ಪದಾಧಿಕಾರಿಗಳಾದ ಮಾರೆಪ್ಪ ಮಲದಕಲ್, ಮಾರ್ತಂಡ ಗಬ್ಬೂರು, ಜಾಕೋಬ್ ಬೊಮ್ಮನಾಳ, ಗ್ರಾಮಸ್ಥರಾದ ಗಂಗಮ್ಮ, ಮಹಾದೇವಮ್ಮ, ಬಸಮ್ಮ, ಬೂದೆಮ್ಮ, ಮುತ್ತಮ್ಮ, ಎಲ್ಲಮ್ಮ, ಶರಣಪ್ಪ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts