ಭೀಕರ ಅಗ್ನಿ ದುರಂತ: ಲಿಫ್ಟ್‌ ಬಳಸಿ ಸಜೀವ ದಹನವಾದ 9 ಮಂದಿ- ಜೀವ ಉಳಿಸಹೋದ ನಾಲ್ವರ ದುರ್ಮರಣ

railwayfire
Published on

ಕೋಲ್ಕತಾ: ಕೋಲ್ಕತಾದ ಪೂರ್ವ ರೈಲ್ವೆ ಮುಖ್ಯ ಕಚೇರಿಯಲ್ಲಿ ಸಂಭವಿಸಿದ ಭೀಕರ ಅಗ್ನಿದುರಂತದಲ್ಲಿ 9 ಮಂದಿ ಸಜೀವವಾಗಿ ದಹಿಸಿರುವ ಘಟನೆ ನಡೆದಿದೆ.

ನಿನ್ನೆ ತಡರಾತ್ರಿ ಈ ಘಟನೆ ಸಂಭವಿಸಿದೆ. ಅಗ್ನಿದುರಂತ ಸಂಭವಿಸುತ್ತಿದ್ದಂತೆಯೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ. ಆದರೆ ದುರದೃಷ್ಟವಶಾತ್‌ ಅವರಲ್ಲಿ ನಾಲ್ವರು ಈ ದುರಂತದಲ್ಲಿ ಸಾವಿಗೀಡಾಗಿದ್ದಾರೆ.

ಸ್ಟ್ರಾಂಡ್ ರಸ್ತೆಯಲ್ಲಿ ದ್ದ 14 ಅಂತಸ್ತಿನ ಕಟ್ಟಡದ 13ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ದುರಂತಕ್ಕೆ ನಿಖರ ಕಾಣ ತಿಳಿದುಬಂದಿಲ್ಲ. ಆದರೆ ದುರಂತ ಸಂಭವಿಸುತ್ತಿದ್ದಂತೆಯೇ ಕೆಳಗಡೆ ಹೋಗಲು ಲಿಫ್ಟ್‌ ಬಳಸಲು ಶುರು ಮಾಡಿದರು. ಈ ಹಿನ್ನೆಲೆಯಲ್ಲಿ ಅದರೊಳಗೆ ಸಿಲುಕಿ ಮೃತಪಟ್ಟಿದ್ದಾರೆ. ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಇದೊಂದು ಅತ್ಯಂತ ದುಃಖಕರ ಘಟನೆಯಾಗಿದ್ದು, ತನಿಖೆಗೆ ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಅಗ್ನಿದುರಂತ ಸಂಭವಿಸಿದಾಗ ಲಿಫ್ಟ್‌ ದಯವಿಟ್ಟು ಬಳಸಬೇಡಿ ಎಂದು ಮಮತಾ ಹೇಳಿದ್ದಾರೆ. ಮೃತ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಹಾಗೂ ಕುಟುಂಬದ ಓರ್ವ ವ್ಯಕ್ತಿಗೆ ಸರ್ಕಾರಿ ಕೆಲಸ ಕೊಡಿಸುವ ಭರವಸೆಯನ್ನು ಅವರು ನೀಡಿದ್ದಾರೆ. ರೈಲ್ವೆ ಇಲಾಖೆಯ ಕಟ್ಟಡ ನಿರ್ಮಾಣದಲ್ಲಿಯೇ ದೋಷ ಇರುವ ಸಾಧ್ಯತೆ ಇದ್ದು, ಅದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net