

ವಿಜಯನಗರ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ ಬೆನ್ನಲ್ಲೇ, ಹಲವು ರೈತರು ಅದರ ವಿರುದ್ಧ ಈಗ ಪ್ರತಿಭಟನೆ ಶುರು ಮಾಡಿದ್ದಾರೆ.
ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ತಂದಿರುವ ಈ ಕೃಷಿ ಕಾನೂನು ಹಿಂದಕ್ಕೆ ಪಡೆದಿರುವುದು ರೈತರಿಗೆ ಆಗಿರುವ ಅನ್ಯಾಯ. ಇದನ್ನು ಸಹಿಸಲು ಸಾಧ್ಯವಿಲ್ಲ. ಅನ್ನದಾತರಿಗೆ ಇದರಿಂದ ಸಮಸ್ಯೆ ಉಂಟಾಗುತ್ತದೆ, ಪುನಃ ರೈತರು ನಲಗುವ ಸ್ಥಿತಿ ಉಂಟಾಗುತ್ತದೆ. ಆದ್ದರಿಂದ ಕಾಯ್ದೆಯನ್ನು ವಾಪಸ್ ಜಾರಿಗೊಳಿಸುವಂತೆ ರಾಯಚೂರಿನ ರೈತರು ಹೋರಾಟ ಶುರು ಮಾಡಿದ್ದಾರೆ.
ಈ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ 50 ಬಂದ್ ಮಾಡಲು ಹೋರಾಟಗಾರರು ಹೊರಟಿದ್ದು, ಹೊಸಪೇಟೆಯ ಸಾಯಿಬಾಬ ಸರ್ಕಲ್‌ನಿಂದ ಟಿ.ಬಿ ಡ್ಯಾಂ ರಸ್ತೆಯವರೆಗೆ ಕಾಲ್ನೆಡೆಗೆಯಲ್ಲಿ ಜಾಥ ನಡೆಸಿದ್ದಾರೆ. ಕೇಂದ್ರ ಸರ್ಕಾರದ ವಿರುಧ್ದ ಆಕ್ರೋಶ ವ್ಯಕ್ತಪಡುತ್ತಿದ್ದಾರೆ.
ರೈತ ಸಂಯುಕ್ತ ಹೋರಾಟ ಕರ್ನಾಟಕದಡಿಯಲ್ಲಿ ಬರುವ ಸಂಘಟನೆಗಳಿಂದ ಹೊರಾಟ ಶುರುವಾಗಿದ್ದು, ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ಸಾಂವಿಧಾನಿಕವಾಗಿ ವಾಪಸ್ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಜತೆಗೆ ಕನಿಷ್ಠ ಬೆಂಬಲಬೆಲೆ ನಿಗದಿಮಾಡಿ ಕಾನೂನ ತರಬೇಕು, ಬೆಳೆ ನಷ್ಟಪರಿಹಾರವನ್ನ ವೈಜ್ಞಾನಿಕವಾಗಿ ಜಾರಿಗೊಳಿಸಬೇಕು ಎಎಂದು ಸಂಘಟನೆಗಳು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿವೆ.