

ಲಖನೌ: ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದ್ದು, ಬಿಜೆಪಿ ಭರ್ಜರಿ ಮುನ್ನಡೆಯತ್ತ ಸಾಗಿದೆ.
ಉತ್ತರ ಪ್ರದೇಶದ ಕೆಲವು ಕ್ಷೇತ್ರಗಳು ಭಾರಿ ಪ್ರಚಾರ ಗಳಿಸಿದ್ದು, ಅದರಲ್ಲಿ ಒಂದು ಹಸ್ತಿನಾಪುರ ಕ್ಷೇತ್ರ. ಇಲ್ಲಿ ಕಾಂಗ್ರೆಸ್ ಉತ್ತರ ಪ್ರದೇಶದ ಸುಂದರಿ ಅರ್ಚನಾ ಗೌತಮ್ ಅವರನ್ನು ಕಣಕ್ಕೆ ಇಳಿಸಿತ್ತು. 2014ರಲ್ಲಿ ಮಿಸ್ ಉತ್ತರ ಪ್ರದೇಶ ಆಗಿದ್ದವರು ಅರ್ಚನಾ.
ನಟಿ, ರೂಪದರ್ಶಿಯೂ ಆಗಿರುವ ಅರ್ಚನಾ ಗೌತಮ್ ಮಿಸ್ ಬಿಕಿನಿ ಇಂಡಿಯಾ, ಮಿಸ್ ಬಿಕಿನಿ ಯೂನಿವರ್ಸ್ ಇಂಡಿಯಾ ಆಗಿಯೂ ಮಿಂಚಿದ್ದಾರೆ. ಮೀರತ್ನ ಐಐಎಂಟಿಯಿಂದ ಬಿಜೆಎಂಸಿ ಯಲ್ಲಿ ಡಿಗ್ರಿ ಪಡೆದುಕೊಂಡಿದ್ದು, 2018ರಲ್ಲಿ 'ಮೋಸ್ಟ್ ಟ್ಯಾಲೆಂಟ್' ಶೀರ್ಷಿಕೆ ಗೆದ್ದಿದ್ದಾರೆ. ಇವರನ್ನು 'ಬಿಕಿನಿ ಗರ್ಲ್' ಎಂದೇ ಕರೆಯಲಾಗುತ್ತದೆ.
.
2015ರಲ್ಲಿ ಬಾಲಿವುಡ್ಗೂ ಇವರು ಪ್ರವೇಶ ಮಾಡಿದ್ದಾರೆ. ಆದ್ದರಿಂದ ಇವರು ಸ್ಟಾರ್ ಎಂದೇ ಎನಿಸಿಕೊಂಡಿದ್ದು, ಇವರ ಮೇಲೆ ಕಾಂಗ್ರೆಸ್ ಭಾರಿ ಭರವಸೆ ಇಟ್ಟುಕೊಂಡಿತ್ತು. ಆದರೆ ಮತದಾರರು ಇವರತ್ತ ಒಲವು ತೋರಲಿಲ್ಲ. ಇಲ್ಲಿ ಕೂಡ ಬಿಜೆಪಿಯ ದಿನೇಶ್ ಕಾಟಿಕ್ ಮುನ್ನಡೆ ಕಾಯ್ದುಕೊಂಡಿದ್ದು, ಅರ್ಚನಾ ಭಾರಿ ಹಿನ್ನಡೆ ಅನುಭವಿಸುತ್ತಿದ್ದಾರೆ.