ಯುರೋಪಿನ ಅತಿ ಎತ್ತರದ ಶಿಖರ ಏರಿದ 8ರ ಪುಟಾಣಿ- 5642 ಮೀಟರ್ ಹತ್ತಿ ದಾಖಲೆ ಪುಟ ಸೇರಿದ

mountain
Published on

ಕರ್ನೂಲು (ಆಂಧ್ರಪ್ರದೇಶ): ಯುರೋಪಿನ ಅತಿ ಎತ್ತರದ ಶಿಖರ ಎನಿಸಿರುವ ಮೌಂಟ್ ಎಲ್ಬ್ರಸ್ ಇದನ್ನು ಹತ್ತುವ ಮೂಲಕ ಎಂಟು ವರ್ಷದ ಬಾಲಕ ದಾಖಲೆ ಬರೆದಿದ್ದಾನೆ. ಏಳು ಬೃಹತ್‌ ಶಿಖರಗಳಲ್ಲಿ ಒಂದು ಎನಿಸಿರುವ ಮೌಂಟ್‌ ಎಲ್ಬ್ರಸ್ ಏರಿರುವ ಈ ಪುಟಾಣಿ ಈ ಬೃಹತ್‌ ಪರ್ವತ ಏರಿರುವ ಅತ್ಯಂತ ಕಿರಿಯ ಎಂದು ದಾಖಲೆ ಪುಟ ಸೇರಿದ್ದಾನೆ.

ಈತನ ಹೆಸರು ಗಂಧಂ ಭುವನ್ ಜೈ. ವೈಜಾಗ್‌ನ ಅನ್ಮಿಶ್ ವರ್ಮ ಮತ್ತು ಅನಂತಪುರದ ಕೆ. ಶಂಕರಯ್ಯ ಎಂಬ ಇಬ್ಬರು ಪರ್ವತಾರೋಹಿಗಳ ಜತೆಗೆ ಈತ 5642 ಮೀಟರ್ ಎತ್ತರದ ಪರ್ವತ ಏರಿದ್ದಾನೆ. ಶಿಖರವನ್ನು ಏರಿದ ನಂತರ, ಭುವನ್ ಹೆಮ್ಮೆಯಿಂದ ತ್ರಿವರ್ಣ ಬಾವುಟವನ್ನು ಪ್ರದರ್ಶಿಸಿದ್ದಾನೆ. ಬಾವುಟದ ಒಂದು ಕಡೆ ಸಂವಿಧಾನದ ಮುನ್ನುಡಿಯನ್ನು ಮತ್ತು ಇನ್ನೊಂದು ಕಡೆ ಬಿಆರ್ ಅಂಬೇಡ್ಕರ್ ಅವರ ಚಿತ್ರ ಇದೆ.

ಭುವನ್ ಕರ್ನೂಲ್‌ನಲ್ಲಿ 3ನೇ ತರಗತಿಯಲ್ಲಿ ಓದುತ್ತಿದ್ದಾನೆ. ಈತನ ತಂದೆ ಗಂಧಂ ಚಂದ್ರದುಡು. ಇವರು ಐಎಎಸ್ ಅಧಿಕಾರಿ. ಕ್ರೀಡೆಯಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಳ್ಳುತ್ತಿದ್ದ ಮಗನ ಹುಮ್ಮಸ್ಸನ್ನು ನೋಡಿ ಅವರು ಪರ್ವತಾರೋಹಕ್ಕೆ ಪ್ರೇರಣೆ ನೀಡಿದ್ದರು. ನಂತರ ಅನಂತಪುರದ ಗ್ರಾಮೀಣ ಅಭಿವೃದ್ಧಿ ಟ್ರಸ್ಟ್‌ನ (ಆರ್‌ಡಿಟಿ) ಕ್ರೀಡಾ ತರಬೇತುದಾರ, ಶಂಕರಯ್ಯ ಅವರ ಬಳಿ ತರಬೇತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net