ದಿನವೂ ಕನಸಲ್ಲಿ ಬಂದು ರೇಪ್‌: ಮಹಿಳೆ ದೂರು ಕೇಳಿ ಬೆಚ್ಚಿಬಿದ್ದ ಪೊಲೀಸರು- ಆಗಿದ್ದೇನು?

dream
Published on

ಔರಂಗಾಬಾದ್‌ (ಬಿಹಾರ): ಮಹಿಳೆಯೊಬ್ಬರು ಪೊಲೀಸ್‌ ಠಾಣೆಯಲ್ಲಿ ಬಲು ಕುತೂಹಲ ಎನ್ನುವ ಹೇಳಿಕೆ ನೀಡಿದ್ದು, ಇದನ್ನು ಕೇಳಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಅದೇನೆಂದರೆ ಮಾಟಗಾರನೊಬ್ಬ ದಿನವೂ ನನಗೆ ಕನಸಿನಲ್ಲಿ ಬಂದು ಅತ್ಯಾಚಾರ ಮಾಡುತ್ತಿದ್ದಾನೆ ಎಂದು ಆಕೆ ಹೇಳಿಕೆ ನೀಡಿದ್ದಾಳೆ.

ಇಂಥದ್ದೊಂದು ಕೇಸ್‌ ದಾಖಲಾಗಿರುವುದು ಬಿಹಾರ ಔರಂಗಾಬಾದ್ ಜಿಲ್ಲೆಯ ಕುದ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ. ಇಲ್ಲಿಯ ಗಾಂಧಿ ಮೈದಾನದ ನಿವಾಸಿಯಾದ ಮಹಿಳೆ ಇಂಥದ್ದೊಂದು ದೂರು ದಾಖಲು ಮಾಡಿದ್ದಾರೆ.

ಅಷ್ಟಕ್ಕೂ ಆಗಿದ್ದೇನೆಂದರೆ, ಈಕೆಯ ಮಗುವಿಗೆ ತೀವ್ರವಾಗಿ ಅನಾರೋಗ್ಯ ಬಾಧಿಸಿತ್ತು. ಯಾರೋ ನೀಡಿದ ಸಲಹೆಯಂತೆ ಈಕೆ ಪ್ರಶಾಂತ್‌ ಚತುರ್ವೇದಿ ಎಂಬ ಮಾಟಗಾರರನ್ನು ಸಂಪರ್ಕಿಸಿದ್ದರೆ. ಆ ವೇಳೆ ಆತ ಏನೋ ಒಂದು ಮಂತ್ರ ಹೇಳಿಕೊಟ್ಟು ಇದನ್ನು ಜಪಿಸು ಎಂದು ಹೇಳಿ ಕಳುಹಿಸಿದ್ದಾನೆ. 15 ದಿನ ಸತತವಾಗಿ ಇದೇ ಮಂತ್ರ ಹೇಳುತ್ತಾ ಬಂದ ನಂತರ ಆಕೆಯ ಮಗ ಪ್ರಾಣ ಕಳೆದುಕೊಂಡಿದ್ದಾನೆ.

ಇದನ್ನು ಮಂತ್ರವಾದಿಗೆ ಹೇಳಿದಾಗ ತನ್ನನ್ನು ಕಾಳಿ ದೇವಸ್ಥಾನಕ್ಕೆ ಬಂದು ಭೇಟಿಯಾಗಲು ಹೇಳಿದ. ಆ ಸಮಯದಲ್ಲಿ ನಾನು ಹೋದಾಗ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದ. ನಾನು ಪಾರಾಗಿದ್ದೆ. ಆದರೆ ಆ ದಿನದಿಂದ ನಿತ್ಯವೂ ನನ್ನ ಕನಸಿನಲ್ಲಿ ಬಂದು ಅತ್ಯಾಚಾರ ಮಾಡುತ್ತಿದ್ದಾನೆ. ಜೀವನವೇ ಬೇಸರವಾಗಿ ಹೋಗಿದೆ, ಮಲಗಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಮಹಿಳೆ ದೂರಿದ್ದಾರೆ. ಈ ದೂರಿನ ಆಧಾರದ ಮೇಲೆ ಮಂತ್ರವಾದಿಯನ್ನು ಪೊಲೀಸರು ಕರೆಸಿದ್ದಾರೆ. ಆದರೆ ಈಕೆಯನ್ನು ಭೇಟಿಯಾಗಿರುವ ಬಗ್ಗೆ ಯಾವುದೇ ದಾಖಲೆಗಳು ಸಿಗಲಿಲ್ಲ. ಮಾತ್ರವಲ್ಲದೇ ಕನಸಿನಲ್ಲಿ ಬಂದು ರೇಪ್‌ ಮಾಡುತ್ತಾನೆ ಎಂದರೆ ಅದಕ್ಕೆ ಸಾಕ್ಷ್ಯಾಧಾರವೂ ಇಲ್ಲದ ಕಾರಣ ಆತನನ್ನು ಎಚ್ಚರಿಸಿ ಕಳುಹಿಸಲಾಗಿದೆ. ಆದರೆ ಮಹಿಳೆ ಮಾತ್ರ ಏನೂ ಮಾಡಲಾಗದೇ ಅಸಹಾಯಕಳಾಗಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net