

ನವದೆಹಲಿ: ಮುಂದಿನ ರಾಷ್ಟ್ರಪತಿ ಯಾರಾಗಲಿದ್ದಾರೆ ಎಂದು ಇನ್ನೇನು ಕೆಲವೇ ಗಂಟೆಗಳಲ್ಲಿ ಫಲಿತಾಂಶ ಹೊರಬೀಳಲಿದೆ. ಇಂದು ಬೆಳಗ್ಗೆ 11 ಗಂಟೆಯಿಂದ ಮತ ಎಣಿಕೆ ಆರಂಭವಾಗಿದ್ದು, ಸಂಜೆಯ ವೇಳೆಗೆ ಫಲಿತಾಂಶ ತಿಳಿಯಲಿದೆ. ಇಲ್ಲಿಯವರೆಗಿನ ಲೆಕ್ಕಾಚಾರದ ಪ್ರಕಾರ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರೇ ಗೆಲುವು ಸಾಧಿಸಲಿದ್ದಾರೆ.
ಇದರ ನಡುವೆಯೇ ಮುರ್ಮು ಅವರ ಊರಿನಲ್ಲಿ ಹಬ್ಬದ ವಾತಾವರಣ ಉಂಟಾಗಿದೆ. 20 ಸಾವಿರ ಬಗೆಯ ಸಿಹಿ ತಿಂಡಿ ತಯಾರಿಸಲಾಗಿದೆ. ನೃತ್ಯ, ಮೆರವಣಿಗೆಯ ಸಿದ್ಧತೆ ಭರದಿಂದ ಸಾಗಿದೆ. ಮುರ್ಮು ಅವರ ತವರು ಒಡಿಶಾದ ರಾಯರಂಗಪುರ. ಅಲ್ಲೀಗ ಗೆಲುವನ್ನು ಸಂಭ್ರಮಿಸಲು ಭರ್ಜರಿ ತಯಾರಿ ನಡೆಸಲಾಗಿದೆ.
ಬುಡಕಟ್ಟು ಜನಾಂಗದವರ ಕುಣಿತ ಹಾಗೂ ವಿಜಯಯಾತ್ರೆಗೆ ಸಿದ್ಧತೆ ಆರಂಭವಾಗಿದೆ. ಅದೇ ಇನ್ನೊಂದೆಡೆ, ದೆಹಲಿಯಲ್ಲೂ ಓಚರ್ ಶಿಬಿರ ವಿಜಯಯಾತ್ರೆಗೆ ಸಿದ್ಧತೆ ಆರಂಭಿಸಿದೆ.