ಕೇಂದ್ರ ಸಚಿವ ಡಾ.ಹರ್ಷವರ್ಧನ್‌ಗೆ ಮಾತೃ ವಿಯೋಗ

harshavardhan
Published on

ನವದೆಹಲಿ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಹರ್ಷ ವರ್ಧನ್‌ ಅವರ ತಾಯಿ ಸ್ನೇಹಲತಾ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಹರ್ಷವರ್ಧನ್‌ ಅವರು, ‘ಭೂಮಿಯ ಮೇಲಿನ ನನ್ನ ಪ್ರೀತಿಯ ವ್ಯಕ್ತಿ, ನನ್ನ ತಾಯಿ ಸ್ವರ್ಗಸ್ಥರಾಗಿದ್ದಾರೆ ಎಂದು ತಿಳಿಸಲು ನೋವಾಗುತ್ತಿದೆ’ ಎಂದು ಹೇಳಿದ್ದಾರೆ.

’ಅಮ್ಮಾ ನೀನು ವಾಪಸ್‌ ಬಾ’ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಹರ್ಷವರ್ಧನ್‌ ಅವರು, ತಾಯಿಯ ಜತೆಗಿರುವ ಫೋಟೋವನ್ನು ಶೇರ್‌ ಮಾಡಿಕೊಂಡಿದ್ದಾರೆ.

89 ವರ್ಷದವರಾಗಿದ್ದ ಸ್ನೇಹಲತಾ ಅವರು, ಹೃದಯ ಸ್ತಂಭನದಿಂದ ನಿಧನರಾಗಿರುವುದಾಗಿ ಅವರು ತಿಳಿಸಿದ್ದಾರೆ. ನನ್ನ ತಾಯಿಯವರದ್ದು ಅತ್ಯುನ್ನತ ವ್ಯಕ್ತಿತ್ವ, ಅವರು ನನ್ನ ಮಾರ್ಗದರ್ಶಿಯಾಗಿದ್ದರು ಎಂದಿರುವ ಹರ್ಷವರ್ಧನ್‌ ಅವರು, ನನ್ನ ಜೀವನದಲ್ಲಿ ಯಾವುದನ್ನೂ ತುಂಬಲು ಸಾಧ್ಯವಾಗದ ನೋವನ್ನು ಬಿಟ್ಟುಹೋಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net