ಶ್ವಾನಗಳ ಮಾಲೀಕರೇ ಹುಷಾರ್‌- ಬೀದಿಗೆ ಹೋದ ನಿಮ್ಮ ನಾಯಿಯೂ ಆಗಬಹುದು ಅರೆಸ್ಟ್‌!

dog
Published on

ಇಂದೋರ್‌: ಕರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೀದಿಗೆ ಬರಬಾರದು ಎಂದು ದೇಶ ಮಾತ್ರವಲ್ಲದೇ ವಿದೇಶದಲ್ಲಿಯೂ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ. ಆದರೆ ವಾಕಿಂಗ್‌ ಹೋಗುವ ನೆಪದಲ್ಲಿ ತಮ್ಮ ನಾಯಿಯನ್ನು ಕರೆದುಕೊಂಡು ಹೋಗುವವರ ಸಂಖ್ಯೆ ಹೆಚ್ಚುತ್ತಲಿದೆ.

ಇದನ್ನು ಕೂಡ ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಬೀದಿಗೆ ಬಂದರೆ ಮಾಲೀಕರ ಜತೆಗೆ ನಾಯಿಯನ್ನೂ ಅರೆಸ್ಟ್‌ ಮಾಡಿಕೊಂಡು ಹೋಗುತ್ತಿದ್ದಾರೆ. ಇಂದೋರ್‌ನಲ್ಲಿ ಈ ನಿಯಮವನ್ನು ಕಟ್ಟುನಿಟ್ಟಿನಲ್ಲಿ ಪಾಲಿಸಲಾಗುತ್ತಿದ್ದು, ನಿಯಮ ಮುರಿದ ತಪ್ಪಿಗೆ ಮಾಲಿಕನ ಜತೆ ನಾಯಿಯೂ ಅರೆಸ್ಟ್ ಆಗುತ್ತಿದ್ದಾರೆ.

ನಾಯಿಯ ಜತೆ ಮಾಲಿಕ ವಾಕಿಂಗ್‌ಗೆ ಹೋಗುತ್ತಿದ್ದ ವೇಳೆ ಗಸ್ತು ತಿರುಗುತ್ತಿದ್ದ ಪೊಲೀಸರು ಇಬ್ಬರನ್ನೂ ಅರೆಸ್ಟ್‌ ಮಾಡಿದ್ದಾರೆ. ತಕ್ಷಣವೇ ಮಾಲಿಕ ಮತ್ತು ನಾಯಿಯ ವಿರುದ್ಧ ನಿಯಮ ಉಲ್ಲಂಘನೆ ಪ್ರಕರಣ ದಾಖಲು ಮಾಡಲಾಗಿದ್ದು, ಇನ್ನು ಎಲ್ಲರಿಗೂ ಇದೇ ಗತಿ ಎಂದಿದ್ದಾರೆ. ಈ ನಿಯಮ ಬೇರೆಡೆ ಶೀಘ್ರದಲ್ಲಿಯೇ ಬಂದರೂ ಅಚ್ಚರಿಯಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net