ಸಿನಿ ರಂಗಕ್ಕೆ ಕರೊನಾಘಾತ! ಒಂದೇ ದಿನ ಸೋಂಕಿಗೆ ಬಲಿಯಾದ ಇಬ್ಬರು ತಾರೆಯರು

tamil film
Published on

ಚೆನ್ನೈ: ಕರೊನಾ ಎರಡನೆಯ ಅಲೆಗೆ ಸಾವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಏರುತ್ತಲೇ ಇದೆ. ಇದಾಗಲೇ ಸಿನಿಮಾ ರಂಗದ ಕೆಲವರು ಈ ಮಹಾಮಾರಿಗೆ ಬಲಿಯಾಗಿದ್ದಾರೆ. ಇಂದು ಬೆಳಗ್ಗೆ ನಟ ಮತ್ತು ಗಾಯಕ ಇಬ್ಬರನ್ನು ಕರೊನಾ ಬಲಿ ಪಡೆದಿದೆ.

ತಮಿಳು ಚಲನಚಿತ್ರರಂಗದ ಪ್ರಸಿದ್ಧರಾಗಿದ್ದ ನಟ ಪಾಂಡು ಮತ್ತು ಗಾಯಕ ಕೋಮಗನ್ ಇಂದು ಮುಂಜಾನೆ ಕರೊನಾದಿಂದಾಗಿ ಮೃತಪಟ್ಟಿದ್ದಾರೆ. ಪಾಂಡು ಅವರಿಗೆ 74 ವರ್ಷ ವಯಸ್ಸಾಗಿತ್ತು. ಈಚೆಗೆ ಇವರಿಗೆ ಕರೊನಾ ಪಾಸಿಟಿವ್‌ ಕಾಣಿಸಿಕೊಂಡಿತ್ತು. ಅವರ ಪತ್ನಿ ಕುಮುದಾ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಐಸಿಯುನಲ್ಲಿದ್ದಾರೆ.

ವಿನ್ಯಾಸಕಾರರೂ ಆಗಿದ್ದ ಪಾಂಡು ಅವರು ಎಐಡಿಎಂಕೆ ಪಕ್ಷದ ಚಿಹ್ನೆಯನ್ನು ಕೂಡ ವಿನ್ಯಾಸಗೊಳಿಸಿ ಖ್ಯಾತಿ ಹೊಂದಿದವರು. ‘ಆಟೋಗ್ರಾಫ್’ ಚಿತ್ರದ ‘ಒವ್ವೊರು ಪುಕಲುಮಯ್’ ಹಾಡಿನ ಮೂಲಕ ಖ್ಯಾತಿ ಗಳಿಸಿದ ಕೋಮಗನ್ ಕೂಡ ಇಂದು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ದೃಷ್ಟಿ ವಿಕಲಚೇತನರಾದ ಅವರು ಕೊಮಗನಿನ್ ರಾಗ ಪ್ರಿಯಾ ಎಂಬ ಸಂಗೀತ ತಂಡವನ್ನು ನಡೆಸುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net