ಪತ್ನಿಯ ಜತೆ ಸಂಸಾರವನ್ನೇ ಮಾಡಿಲ್ಲದವ ಡಿವೋರ್ಸ್‌ ಕೊಡದೇ ಮರುವಿವಾಹವಾಗಬಹುದೆ?

nyayadevate
Published on
ನಾನೊಬ್ಬರನ್ನು ಪ್ರೀತಿಸುತ್ತಿದ್ದೇನೆ. ಅವರು ಮೊದಲ ಪತ್ನಿಯ ಜತೆ ಕೆಲ ತಿಂಗಳು ಮಾತ್ರ ಇದ್ದರು. ಆದರೆ ದಂಪತಿ ನಡುವೆ ಸರಿಬರದೇ ಮೊದಲಿನಿಂದಲೂ ಬೇರೆ ಬೇರೆಯಾಗಿದ್ದಾರೆ. ಪತ್ನಿ ಮನೆಬಿಟ್ಟು ಹೋದವಳು ವಾಪಸ್‌ ಬರುವುದಿಲ್ಲ. ನಾನೇ ವಿಚ್ಛೇದನಕ್ಕೆ ಅರ್ಜಿ ಹಾಕಿದ್ರೆ ಲಕ್ಷಾಂತರ ರೂಪಾಯಿ ಕೇಳುತ್ತಾಳೆ. ಅದಕ್ಕೆ ಅದರ ಉಸಾಬರಿ ಬೇಡ. ಅವಳು ವಾಪಸ್‌ ಬರುವುದಿಲ್ಲ ಎಂದು ಗೊತ್ತು. ಆದ್ದರಿಂದ ನಾವು ಮದುವೆಯಾಗೋಣ ಎನ್ನುತ್ತಿದ್ದಾರೆ. ನನಗೆ ಹೆದರಿಕೆ. ಒಪ್ಪಿಕೊಂಡರೆ ಮುಂದೆ ತೊಂದರೆ ಅಗುತ್ತದೆಯೇ?

ಉತ್ತರ: ಮೊದಲ ವಿವಾಹದಿಂದ ವಿಚ್ಛೇದನ ಪಡೆಯದೇ ಮತ್ತೊಂದು ಮದುವೆ ಆಗುವುದು ಕಾನೂನುಬಾಹಿರ ಹಾಗೂ ಶಿಕ್ಷಾರ್ಹ ಅಪರಾಧ. ವಿಚ್ಛೇದನ ಪಡೆದ ನಂತರ ಮದುವೆಯಾಗಿ. ನಿಮ್ಮನ್ನು ಮದುವೆ ಆಗಲೇ ಬೇಕೆಂದಿದ್ದರೆ, ಮೊದಲ ಹೆಂಡತಿಯನ್ನು ಒಪ್ಪಿಸಿ ಅವಳಿಂದ ವಿಚ್ಛೇದನ ಪಡೆಯಲೇ ಬೇಕು. ಯಾವುದೇ ಕಾರಣಕ್ಕೂ ನೀವು ಆತುರ ಪಟ್ಟು ಅವರನ್ನು ಈಗಲೇ ಮದುವೆ ಆಗಬೇಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net