ಈ ರಾಶಿಯವರಿಗೆ ಮಾತೇ ಮುಳುವಾದೀತು, ಬಾಯಿ ಬಿಡುವಾಗ ಇರಲಿ ಎಚ್ಚರ: ನಿತ್ಯ ಭವಿಷ್ಯ

Nitya-Bhavishya-vvani-1-2-1-1
Published on

ಮೇಷ: ಪತ್ನಿಯೊಂದಿಗೆ ಸಮಸ್ಯೆಗಳನ್ನು ಹಂಚಿಕೊಳ್ಳಿ. ವಿವಾಹದ ಪ್ರಯತ್ನದಲ್ಲಿ ಸಕಾರಾತ್ಮಕ ಫಲಿತಾಂಶ. ಮಗಳಿಂದ ಶುಭ ಸುದ್ದಿ. ಶುಭಸಂಖ್ಯೆ 9

ವೃಷಭ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸೌಹಾರ್ದ ಮಾತುಕತೆಯಿಂದ ಬಗೆಹರಿಸಿಕೊಳ್ಳಿ. ಬಂಧು ವರ್ಗದಲ್ಲಿ ವಿರಸ ತಲೆದೋರೀತು. ಶುಭಸಂಖ್ಯೆ 6

ಮಿಥುನ: ಮಕ್ಕಳ ಭವಿಷ್ಯದ ಬಗ್ಗೆ ದೃಢ ನಿರ್ಧಾರ ತೆಗೆದುಕೊಳ್ಳಿ. ಅತಿಥಿ ಸತ್ಕಾರದಿಂದ ಸಮಾಧಾನ. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ 6

ಕಟಕ: ನಿರೀಕ್ಷೆಯಲ್ಲಿ ಇದ್ದ ಭೂಮಿ ಖರೀದಿ ಕಾರ್ಯಕ್ಕೆ ಚಾಲನೆ, ತಾಯಿಯ ಮಾರ್ಗದರ್ಶನ ಪಾಲಿಸಿ. ಬಂಧುಗಳ ಭೇಟಿ. ಶುಭಸಂಖ್ಯೆ: 1

ಸಿಂಹ: ಸಹೋದರಿಯ ಮನೆಯಲ್ಲಿ ಭೋಜನ, ಸಹೋದರರೊಂದಿಗೆ ತಾಳ್ಮೆಯಿರಲಿ. ಜವಾಬ್ದಾರಿ ಕೆಲಸದ ಹೊಣೆ. ಶುಭಸಂಖ್ಯೆ 8

ಕನ್ಯಾ: ಮಹತ್ವದ ನಿರ್ಣಯ ತೆಗೆದುಕೊಳ್ಳಲು ಗೊಂದಲ ಉಂಟಾಗಬಹುದು. ನಿಮ್ಮ ಮಾತಿನಿಂದ ಶತ್ರುಗಳು ಸೃಷ್ಟಿಯಾಗುತ್ತಾರೆ. ಶುಭಸಂಖ್ಯೆ 7

ತುಲಾ: ಕಾರ್ಯದಲ್ಲಿ ವಿಘ್ನ ತಲೆದೋರಿ ಬೇಸರ. ನಿಮ್ಮಲ್ಲಿರುವ ಕಲೆಯ ಅನಾವರಣಕ್ಕೆ ಅವಕಾಶ. ದಿನಾಂತ್ಯದಲ್ಲಿ ಹಿತೈಷಿಗಳ ಭೇಟಿ. ಶುಭಸಂಖ್ಯೆ 6

ವೃಶ್ಚಿಕ: ಯಾವುದೇ ಕೆಲಸದಲ್ಲಿ ವೇಗವಿಲ್ಲ. ಸೋಮಾರಿತನ ಬಿಟ್ಟರೆ ಉತ್ತಮ ಭವಿಷ್ಯ. ಹಿರಿಯ ಸಹೋದರಿಯಿಂದ ಸಾಂತ್ವನ. ಶುಭಸಂಖ್ಯೆ 4

ಧನಸ್ಸು: ದೇಹಾರೋಗ್ಯದ ಬಗ್ಗೆ ಕಾಳಜಿ ವಹಿಸಿ. ಅಪಾಯಕ್ಕೆ ಆಹ್ವಾನ ಬೇಡ. ಉತ್ತಮ ಅನ್ನಪಾನ. ದಿನಾಂತ್ಯದಲ್ಲಿ ಸಂತಸ. ಶುಭಸಂಖ್ಯೆ 6.

ಮಕರ: ಪಂಚಗ್ರಹ ಯೋಗದಲ್ಲಿದ್ದೀರಿ. ಗೊಂದಲ ಸಹಜ. ಮನಸ್ಸಿನ ಮೇಲೆ ನಿಯಂತ್ರಣ ಇರಲಿ. ಈಶ್ವರನನ್ನು ಆರಾಧಿಸಿ. ಶುಭಸಂಖ್ಯೆ 7

ಕುಂಭ: ಮನಸ್ಸಿಗೆ ಕ್ಲೇಶ ಉಂಟಾದೀತು. ಮನೆಯಲ್ಲಿ ಅವಮಾನಗಳಾಗುವ ಸಾಧ್ಯತೆ. ನಟರಿಗೆ ಅವಕಾಶ ದೊರೆಯುವುದು. ಶುಭಸಂಖ್ಯೆ 6

ಮೀನ: ಸಾಮಾಜಿಕವಾಗಿ ತೊಡಗಿಸಿಕೊಳ್ಳಿ. ಮನಸ್ಸಿಗೆ ಸಮಾಧಾನ ಸಿಗುತ್ತದೆ. ಸಂದರ್ಭದಲ್ಲಿ ವಿಶೇಷ ವಸ್ತು ಪ್ರಾಪ್ತಿಯಾಗಿ ಸಮಾಧಾನ. ಶುಭಸಂಖ್ಯೆ 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net