ದೆಹಲಿ ವಿವಿಯಲ್ಲಿವೆ 635 ಪ್ರೊಫೆಸರ್‌, ಅಸೋಸಿಯೇಟ್‌ ಪ್ರೊಫೆಸರ್ ಹುದ್ದೆಗಳು: ಅರ್ಜಿ ಆಹ್ವಾನ

dehli vv
Published on

ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಮತ್ತು ಅಸೋಸಿಯೇಟ್‌ ಪ್ರೊಫೆಸರ್‌ಗಳ 635 ಹುದ್ದೆಗಳು ಖಾಲಿ ಇದ್ದು ಅರ್ಜಿ ಆಹ್ವಾನಿಸಲಾಗಿದೆ.

635 ಹುದ್ದೆಗಳ ವಿವರ ಹೀಗಿದೆ
ಪ್ರೊಫೆಸರ್ - 186
ಅಸೋಸಿಯೇಟ್‌ ಪ್ರೊಫೆಸರ್ - 449

ಶೈಕ್ಷಣಿಕ ವಿದ್ಯಾರ್ಹತೆ: ಪಿಎಚ್‌ಡಿ ಜತೆಗೆ ನೆಟ್‌, ಎಸ್‌ಎಲ್‌ಇಟಿ ಅರ್ಹತೆ ಪಡೆದಿರಬೇಕು. ಹಾಗೂ ಕನಿಷ್ಠ ಕಾರ್ಯಾನುಭವವನ್ನು ಹೊಂದಿರಬೇಕು.

ಅಭ್ಯರ್ಥಿಯು ಉತ್ತಮ ಶೈಕ್ಷಣಿಕ ದಾಖಲೆಯನ್ನು ಹೊಂದಿರಬೇಕು, ಸಂಬಂಧಿತ ವಿಭಾಗಗಳಲ್ಲಿ ಪಿಎಚ್‌ಡಿ ಪದವಿ, ಕನಿಷ್ಠ 55% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಮತ್ತು ಬೋಧನೆ / ಸಂಶೋಧನಾ ಅನುಭವ - ಪ್ರೊಫೆಸರ್‌ಗೆ 10 ವರ್ಷಗಳು ಮತ್ತು ಅಸೋಸಿಯೇಟ್ ಪ್ರೊಫೆಸರ್‌ಗೆ 08 ವರ್ಷಗಳ ಅನುಭವ ಇರಬೇಕು.


ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳು/OBC/EWS ಅಭ್ಯರ್ಥಿಗಳಿಗೆ 2000 ರೂ. ಮತ್ತು SC/ST/PwD ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಮೊದಲು ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಬಳಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಕೊನೆಯ ದಿನ: ಫೆಬ್ರವರಿ 07http://www.du.ac.in/

ಹೆಚ್ಚಿನ ಮಾಹಿತಿಗೆ ಆಸಕ್ತರು ದೆಹಲಿ ವಿಶ್ವವಿದ್ಯಾಲಯದ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಲಿಂಕ್‌ ಬೇಕಿದ್ದರೆ ಕ್ಲಿಕ್ಕಿಸಿ: https://bit.ly/3r17Op0

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net