

ಕಾನ್ಸ್ (ಫ್ರಾನ್ಸ್): ಬಾಲಿವುಡ್, ಹಾಲಿವುಡ್ ಸೇರಿದಂತೆ ಸ್ಯಾಂಡಲ್ವುಡ್ನಲ್ಲಿಯೂ ಮಿಂಚಿರುವ ಕನ್ನಡತಿ ದೀಪಿಕಾ ಪಡುಕೋಣೆಯವರ ಖ್ಯಾತಿ ಅಷ್ಟಿಷ್ಟಲ್ಲ. ಫ್ರಾನ್ಸ್ನ ಕಾನ್ನಲ್ಲಿ ನಡೆಯುತ್ತಿರುವ ಸಿನಿಮೋತ್ಸವಕ್ಕೆ ಇಷ್ಟು ವರ್ಷ ಅತಿಥಿಯಾಗಿ ಹೋಗುತ್ತಿದ್ದ ದೀಪಿಕಾ, ಇದೇ ಮೊದಲ ಬಾರಿಗೆ ಜಡ್ಜ್ ಆಗಿ ಜ್ಯೂರಿ ಪ್ಯಾನೆಲ್ ಸೇರಿಕೊಂಡಿದ್ದಾರೆ.
ಇಷ್ಟೊಂದು ಉನ್ನತ ಮಟ್ಟದ ಕಾರ್ಯಕ್ರಮಗಳಿಗೆ ಹೋದಾಗ ಅವರು ಹೋದಲ್ಲಿ, ಬಂದಲ್ಲಿ ಕ್ಯಾಮೆರಾ ಕಣ್ಣು ನೆಟ್ಟಿರುತ್ತದೆ. ಇದೇ ಕಾರಣಕ್ಕೆ ಬೇರೆಯವರಿಂದ ವಿಭಿನ್ನವಾಗಿ ಕಾಣಿಸಬೇಕು ಎಂಬ ಆಸೆಯಿಂದ ವಿಭಿನ್ನ (ಹಲವು ಬಾರಿ ವಿಚಿತ್ರ ಎನಿಸುವ) ಡ್ರೆಸ್ಗಳನ್ನು ಇವರು ಹಾಕುವುದುಂಟು. ಇದೀಗ ಅಂಥದ್ದೇ ಡ್ರೆಸ್ ಹಾಕಿ ಭಾರಿ ಟ್ರೋಲ್ ಆಗುತ್ತಿದ್ದಾರೆ ಈ ನಟಿ.
ಡ್ರೆಸ್ ಹಾಕಿದ ಮೇಲೆ ಅದನ್ನು ಹೇಗೆ ನಿಭಾಯಿಸಬೇಕು ಎನ್ನುವುದೂ ತಿಳಿದಿರಬೇಕು. ಆದರೆ ತಮ್ಮ ತಳುಕುಬಳುಕಿನ ದೇಹಕ್ಕೆ ಭಾರಿ ತೂಕದ ಡ್ರೆಸ್ ಹಾಕಿರುವ ದೀಪಿಕಾ ಅದನ್ನು ನಿಭಾಯಿಸಲು ಆಗದೇ ಪೇಚಾಡುತ್ತಿರುವ ದೃಶ್ಯ ಜಾಲತಾಣದಲ್ಲಿ ವೈರಲ್ ಆಗಿದೆ.
ದೀಪಿಕಾ ಮೊದಲ ದಿನ ರೆಟ್ರೋ ಸೀರೆ ಧರಿಸಿದ್ದರು. ಅದನ್ನು ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಈಗ ಅವರು ಧರಿಸಿರುವ ಆರೆಂಜ್ ಗೌನ್ ಮಾತ್ರ ಸರಿಯಾಗಿ ಟ್ರೋಲ್ ಆಗುತ್ತಿದೆ. ಸ್ಟ್ರಗಲ್ ಈಸ್ ರಿಯಲ್ (ಈ ರೀತಿ ಕಷ್ಟ ಪಡುತ್ತಿರುವ ದೃಶ್ಯ ನಿಜವಾದದ್ದು) ಎಂದು ಕಾಮಿಡಿ ಮಾಡಿ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಏಕೆಂದರೆ ಇವರು ಧರಿಸಿದ್ದ ಗೌನ್ ಬಹಳ ದೊಡ್ಡದಿದ್ದು, ಬಟ್ಟೆಯನ್ನು ಸುತ್ತಿಕೊಂಡಂತೆ ಕಾಣುತ್ತಿದೆ. ಚಿಕ್ಕ ಶರೀರವನ್ನು ಈ ಡ್ರೆಸ್ ಅದೆಷ್ಟು ಸುತ್ತಿಕೊಂಡಿದೆ ಎಂದು ಊಹಿಸುವುದೂ ಕಷ್ಟ ಎನ್ನುವಂತಿದೆ ಈ ಡ್ರೆಸ್. ಇದನ್ನು ನಿಭಾಯಿಸಲು ಈ ನಟಿಗೆ ಸಾಧ್ಯವಾಗದೇ ಕಷ್ಟಪಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಇದಕ್ಕೆ ವಿಧವಿಧ ರೀತಿಯ ಕಮೆಂಟ್ಗಳು ಬರುತ್ತಿದ್ದು, ನೀಟಾಗಿ ಡ್ರೆಸ್ ಹಾಕುವ ಬದಲು ಇಂಥ ವಿಚಿತ್ರ ಡ್ರೆಸ್ ಹಾಕಿ ಪರದಾಡುವುದು ಏಕೆ ಎಂದು ಹಲವಾರು ಮಂದಿ ಕಮೆಂಟ್ ಮಾಡಿದ್ದಾರೆ. ನೀವು ಭಾರತವನ್ನು ಪ್ರತಿನಿಧಿಸುತ್ತಿದ್ದೀರಿ, ಹಾಗಾಗಿ ನೋಡುಗರಿಗೆ ಮಾದರಿಯಾಗುವಂತಹ ಬಟ್ಟೆಗಳನ್ನು ಧರಿಸಿ ಎಂದೂ ಬುದ್ಧಿ ಹೇಳಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ: