ಸಿನಿಮಾದಲ್ಲಿ ನಟಿಸಲು ಸಲ್ಮಾನ್​ ಖಾನ್​ ಕೊಟ್ಟ ಆಫರ್​ ರಿಜೆಕ್ಟ್​ ಮಾಡಿದ ದೀಪಿಕಾ- ಕಾರಣ ಇದಂತೆ...

deepika
Published on

ನವದೆಹಲಿ: ಕರುನಾಡ ಕುವರಿ ದೀಪಿಕಾ ಪಡುಕೋಣೆ ಬಾಲಿವುಡ್​ ಅಷ್ಟೇ ಅಲ್ಲದೇ ಹಾಲಿವುಡ್​ನಲ್ಲಿಯೂ ಮಿಂಚಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡವರು. ಘಟಾನುಘಟಿ ನಾಯಕರ ಜತೆಗೆ ನಾಯಕಿಯಾಗಿ ನಟಿಸಿರುವ ಅವರು, ಸಲ್ಮಾನ್​ ಖಾನ್​ ಜತೆ ಇದುವರೆಗೂ ನಟಿಸಿಲ್ಲ.

ಆದರೆ ಈ ಬಗ್ಗೆ ಮಾಹಿತಿ ನೀಡದ ಅವರು, ಮೊದಲ ಬಾರಿಗೆ ಸಲ್ಮಾನ್​ ಖಾನ್​ ಆಫರ್​ ಕೊಟ್ಟಾಗ ತಾವು ಅದನ್ನು ನಿರಾಕರಿಸಿದ್ದರ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಬಾಲಿವುಡ್‌ನಲ್ಲಿ ನಟಿಸಲು ನನಗೆ ಮೊದಲ ಬಾರಿಗೆ ಆಫರ್‌ ಕೊಟ್ಟವರು ಸಲ್ಮಾನ್‌ ಖಾನ್‌. ಆದರೆ ನಾನು ನಟಿಸಲು ಒಪ್ಪಲಿಲ್ಲ ಎಂದಿರುವ ದೀಪಿಕಾ ಅದಕ್ಕೆ ಕಾರಣವನ್ನೂ ಕೊಟ್ಟಿದ್ದಾರೆ. ಅದೇನೆಂದರೆ, ಸಲ್ಮಾನ್​ ಖಾನ್​ ಆಫರ್​ ಕೊಟ್ಟ ಸಂದರ್ಭದಲ್ಲಿ ನಾನಿನ್ನೂ ಮಾಡೆಲ್​ ಆಗಿದ್ದೆ. ಆಗ ನಟಿಯಾಗಲು ನನಗೆ ಆಸಕ್ತಿಯೇ ಇರಲಿಲ್ಲ. ಅದಕ್ಕಾಗಿ ಒಪ್ಪಿರಲಿಲ್ಲ. ಅಂತಹ ಆಫರ್‌ ನಿರಾಕರಿಸಿದ್ದನ್ನು ನೆನೆಸಿಕೊಂಡರೆ ಈಗಲೂ ಅಚ್ಚರಿಯಾಗುತ್ತೆ. ನಾನು ಮಾಡೆಲಿಂಗ್‌ ಆಗಿ ಗುರುತಿಸಿಕೊಂಡಿದ್ದೆ. ಎರಡು ವರ್ಷಗಳ ನಂತರ ʼಓಂ ಶಾಂತಿ ಓಂʼ ಸಿನಿಮಾದಲ್ಲಿ ನಟಿಸಬೇಕಾಗಿ ಬಂತು ಎಂದು ನೆನಪಿಸಿಕೊಂಡಿದ್ದಾರೆ.

ಅಂದಹಾಗೆ, ಸಲ್ಮಾನ್ ಮತ್ತು ದೀಪಿಕಾ ಯಾವುದೇ ಸಿನಿಮಾದಲ್ಲಿ ಒಟ್ಟಿಗೆ ನಟಿಸಿಲ್ಲ. ಆದರೆ ದೀಪಿಕಾ ತಮ್ಮ ಚಲನಚಿತ್ರಗಳನ್ನು ಪ್ರಚಾರ ಮಾಡಲು ಬಿಗ್ ಬಾಸ್ ಶೋನಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಾರೆ ಅಷ್ಟೇ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net