More

    ‘ಹಿಜಾಬ್‌ ತೆಗೆಯಿರಿ, ಇಲ್ಲಾ ಟಿ.ಸಿ. ತಗೊಂಡು ಹೋಗಿ, ಮೂಲಭೂತಹಕ್ಕು ಸಿಗೋ ಶಾಲೆಗೇ ಸೇರ್ಕೊಳ್ಳಿ…’

    ವಯನಾಡ್‌: ಕರ್ನಾಟಕದಲ್ಲಿ ಆರಂಭವಾದ ಹಿಜಾಬ್​ ಗಲಾಟೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಚರ್ಚೆಯಾಗುತ್ತಿರುವುದು ಹೊಸ ವಿಷಯವೇನಲ್ಲ. ಹಲವೆಡೆಗಳಲ್ಲಿಯೂ ಹಿಜಾಬ್​ಧಾರಿಗಳ ವಿರುದ್ಧವೂ ಹೋರಾಟ ಶುರುವಾಗಿದೆ. ಅಂಥದ್ದೇ ಒಂದು ಗಲಾಟೆ ನೆರೆಯ ಕೇರಳ ರಾಜ್ಯದಲ್ಲಿಯೂ ಕಿಡಿ ಹೊತ್ತಿಸಿದೆ.

    ಕೇರಳದ ವಯನಾಡಿನ ಮಾನಂದವಾಡಿಯ ಕಾನ್ವೆಂಟ್‌ನ ಪ್ರಿನ್ಸಿಪಾಲ್‌ ಒಬ್ಬರು ‘ಹಿಜಾಬ್‌ ತೆಗೆಯಿರಿ, ಇಲ್ಲಾ ಟಿ.ಸಿ. ತೆಗೆದುಕೊಂಡು ಹೋಗಿ, ಮೂಲಭೂತ ಹಕ್ಕು ನಿಮಗೆ ಬೇಕಾದರೆ ಅದು ಸಿಗೋ ಶಾಲೆಗೇ ಹೋಗಿ ಸೇರಿಕೊಳ್ಳಿ ಎನ್ನುವ ಮೂಲಕ ಭಾರಿ ವಿವಾದ ಸೃಷ್ಟಿಸಿದ್ದಾರೆ.

    ಮಾನಂದವಾಡಿಯ ಲಿಟ್ಲ್  ಫ್ಲವರ್‌ ಶಾಲೆಯಲ್ಲಿ ಕೆಲ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಬಂದಿದ್ದರು. ಅದನ್ನು ತೆಗೆಯಲು ಪ್ರಿನ್ಸಿಪಾಲ್‌ ಸೂಚಿಸಿದ್ದರು. ಆದರೆ ವಿದ್ಯಾರ್ಥಿನಿಯರ ಪಾಲಕರು ಪ್ರತಿಭಟನೆ ನಡೆಸಿದರು. ಅಷ್ಟಕ್ಕೂ ಶಿಕ್ಷಕಿ ಹೇಳಿದ್ದಕ್ಕೂ ಒಂದು ಕಾರಣವಿತ್ತು. ಇಲ್ಲಿಯವರೆಗೆ ಈ ಶಾಲೆಯಲ್ಲಿ ಹಿಜಾಬ್​ಗೆ ಅವಕಾಶ ಇರಲಿಲ್ಲ ಎನ್ನಲಾಗಿದೆ. ಇದೀಗ ಕರ್ನಾಟಕದ ಬೆಳವಣಿಗೆ ನಂತರ ಗಲಾಟೆ ಶುರು ಮಾಡಿರುವುದು ಶಿಕ್ಷಕಿಯನ್ನು ಕೆರಳಿಸಿದೆ.

    ಆದರೆ ಪಾಲಕರ ಆಕ್ರೋಶಕ್ಕೆ ಕಾರಣ ಏನೆಂದರೆ, ಕ್ರೈಸ್ತ ಸನ್ಯಾಸಿನಿಯಾಗಿರುವ ಪ್ರಿನ್ಸಿಪಾಲ್‌ ತಾವೇ ತಲೆಗೆ ಸ್ಕಾರ್ಫ್​ ಧರಿಸಿ ಬರುವಾಗ ತಮ್ಮ ಮಕ್ಕಳಿಗೆ ಏಕೆ ಹೀಗೆ ಹೇಳುತ್ತಾರೆ ಎನ್ನುವುದು. ಒಟ್ಟಿನಲ್ಲಿ ಈ ಗಲಾಟೆ ನಂತರ ಹಿಜಾಬ್‌ ಮೇಲಿನ ನಿಷೇಧವನ್ನು ಶಾಲೆ ಹಿಂಪಡೆದಿದೆ ಎನ್ನಲಾಗಿದೆ.

    ‘ಓದಿಗಿಂತ ಮೊದ್ಲು ಹಿಜಾಬ್‌ ಬೇಕಿದ್ರೆ ಅಜ್ಜಂದಿರು ಭಾರತದ ಬದ್ಲು ಪಾಕಿಸ್ತಾನವನ್ನೇ ಆಯ್ಕೆ ಮಾಡಿಕೊಳ್ಬೋದಿತ್ತಲ್ಲ!’

    ಆತನ ದೃಷ್ಟಿ ಬಿತ್ತು ಎಂದರೆ ಸೆಕ್ಸ್‌ಗೆ ಕರೆದನೆಂದೇ ಅರ್ಥವಾಗಿದ್ದ ಕಾಲದ್ದು ಈ ಹಿಜಾಬ್‌ ಎಂದ ಲೇಖಕಿ ತಸ್ಲೀಮಾ ನಸ್ರೀನ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts