VIDEO: ಗಣೇಶನ ಎದುರು ನರ್ತಿಸುತ್ತಲೇ ಕುಸಿದುಬಿದ್ದು ಮೃತಪಟ್ಟ ಯುವಕ- ವಿಡಿಯೋ ವೈರಲ್‌

dancing
Published on

ಅನಂತಪುರ (ಆಂಧ್ರಪ್ರದೇಶ): ಗಣೇಶನ ಹಬ್ಬ ಕರೊನಾದ ನಡುವೆಯೂ ಭರ್ಜರಿಯಾಗಿಯೇ ಸಾಗಿದೆ. ಗಣೇಶನ ಮೂರ್ತಿ ಇಟ್ಟಲ್ಲಿ ಹಾಡು, ನೃತ್ಯ ಎಲ್ಲವೂ ಸಾಮಾನ್ಯ. ಆದರೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಒಂದು ಅನಾಹುತ ಸಂಭವಿಸಿದೆ.

ಅದೇನೆಂದರೆ ಗಣೇಶನ ಮೂರ್ತಿಯ ಮುಂದೆ ಸಿನಿಮಾ ಹಾಡಿಗೆ ಹೆಜ್ಜೆ ಹಾಕುತ್ತ ಉತ್ಸಾಹದಲ್ಲಿದ್ದ ಯುವಕನೊಬ್ಬ ದಿಢೀರನೆ ಕುಸಿದು ಮೃತಪಟ್ಟಿದ್ದಾನೆ. ಅನಂತಪುರ ಜಿಲ್ಲೆಯ ಗುತ್ತಿ ಬಳಿಯ ಗೌತಮಿಪುರ ಕಾಲೋನಿಯಲ್ಲಿ ಈ ದುರ್ಘಟನೆ ನಡೆದಿದೆ.

ಕುಲ್ಲಯ್ಯಸ್ವಾಮಿ (ಚರಣ್) ಮೃತಪಟ್ಟ ಯುವಕ. ಯುವಕ ಕುಸಿದು ಬೀಳುತ್ತಿದ್ದಂತೆಯೇ ಸರ್ಕಾರಿ ಆಸ್ಪತ್ರೆಗೆ ಆತನನ್ನು ಸಾಗಿಸಲಾಯಿತಾದರೂ ಆತ ಮೃತಪಟ್ಟಿದ್ದ.

ಇಲ್ಲಿದೆ ನೋಡಿ ದುರ್ಘಟನೆಯ ವಿಡಿಯೋ: (ಕೃಪೆ ಸಿಎನ್‌9 ನ್ಯೂಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net