VIDEO: ಮದುಮಕ್ಕಳಿಗೆ ಸ್ನೇಹಿತರು ಮಂಟಪದಲ್ಲೇ ಇಂಥ ಗಿಫ್ಟ್‌ ಕೊಡೋದಾ? ಮುಜುಗರದಲ್ಲಿ ವಧು-ವರರು

marraige
Published on

ಇತ್ತೀಚಿನ ದಿನಗಳಲ್ಲಿ ಮದುವೆ ವಿಡಿಯೋಗಳು ಭಾರಿ ವೈರಲ್‌ ಆಗುತ್ತಿವೆ. ಕೆಲವೊಂದು ವಿಡಿಯೋಗಳನ್ನು ನೋಡಿದಾಗ ನಕ್ಕು ನಕ್ಕು ಹುಣ್ಣಾಗುವುದೂ ಇದೆ.

ಅದೇ ರೀತಿಯ ವಿಡಿಯೋ ಒಂದು ಇದೀಗ ವೈರಲ್‌ ಆಗಿದೆ. ಆದರೆ ಈ ಘಟನೆ ಸ್ವಲ್ಪ ವಿಭಿನ್ನವಾಗಿದೆ. ಅದೇನೆಂದರೆ ಇಲ್ಲಿ ಸ್ನೇಹಿತರು ಮದುಮಕ್ಕಳಿಗಾಗಿ ಮಂಟಪದಲ್ಲಿ ನೀಡಿರುವ ಗಿಫ್ಟ್‌ನ ಘಟನೆ ನದಾಗಿದೆ. ಗಿಫ್ಟ್‌ ಸಂಪೂರ್ಣ ಬಿಚ್ಚಿದ ಮೇಲೆ ಮದುಮಕ್ಕಳು ಪೇಚಿಗೆ ಸಿಲುಕಿದರೆ ನೋಡಿದವರು ನಕ್ಕು ಸುಸ್ತಾಗುವ ಘಟನೆ ಇದು.

ಮದುವೆಯಲ್ಲಿ ಗೆಳೆಯರು ಮಾಡುವ ಕೀಟಲೆಗಳಿಗೆ ಇದು ಸಾಕ್ಷಿಯಾಗಿದೆ. ಇಂಥದ್ದೇ ಘಟನೆ ಹಲವು ಕಡೆಗಳಲ್ಲಿ ನಡೆಯುತ್ತವೆಯಾದರೂ ಈ ವಿಡಿಯೋ ಮಾತ್ರ ವೈರಲ್‌ ಆಗಿದೆ.

ಇಲ್ಲಿ ಆಗಿದ್ದೇನೆಂದರೆ, ಮದುವೆ ಗಂಡು ಮತ್ತು ಹೆಣ್ಣು ಮಂಟಪದಲ್ಲಿ ನಿಂತಿದ್ದಾರೆ. ಆ ಸಮಯದಲ್ಲಿ ಹುಡುಗನ ಗೆಳೆಯರು ಗಿಫ್ಟ್‌ ಕೊಡುತ್ತಾರೆ. ಪ್ಯಾಕ್‌ ಭರ್ಜರಿ ಆಗಿರುತ್ತದೆ. ಅಲ್ಲಿಯೇ ಬಿಚ್ಚಿ ನೋಡುವಂತೆ ಸ್ನೇಹಿತರು ಹೇಳುತ್ತಾರೆ. ಆಗ ಮದುಮಗ ಒಂದೊಂದೇ ಪ್ಯಾಕ್‌ ಬಿಚ್ಚುತ್ತಾ ಹೋಗುತ್ತಾನೆ. ಎಷ್ಟು ಬಿಚ್ಚಿದರೂ ಒಂದರ ಒಳಗೆ ಒಂದು ಪ್ಯಾಕ್‌ ಬರುತ್ತಲೇ ಹೋಗುತ್ತದೆ. ಒಳಗಡೆ ಏನಿರಬಹುದು ಎಂದು ವಧು ಕೂಡ ಕುತೂಹಲದಿಂದ ನೋಡತ್ತಿರುತ್ತಾಳೆ.

ಎಲ್ಲಾ ಪ್ಯಾಕ್‌ ಬಿಚ್ಚಿದ ಮೇಲೆ ಒಳಗಡೆ ಏನೂ ಇರುವುದಿಲ್ಲ. ಇದು ಮದುಮಗನನ್ನು ಒಂದು ಕ್ಷಣ ಮುಜುಗರ ಮಾಡುತ್ತದೆ. ಪ್ಯಾಕ್‌ ಅನ್ನು ಅಲ್ಲಿಯೇ ಎಸೆಯುತ್ತಾನೆ. ನೋಡುಗರಿಗೆ ತಮಾಷೆಯಾಗಿಯೂ ಮದುಮಕ್ಕಳು ಹಾಗೂ ಅವರ ಕುಟುಂದವರಿಗೆ ಸ್ವಲ್ಪ ಇರುಸು ಮುರುಸು ಎನಿಸಿರುವ ಈ ವಿಡಿಯೋ ನೀವೂ ನೋಡಿ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net