VIDEO: ವಿಜಯನಗರ ಕ್ರೀಡಾಂಗಣದಲ್ಲಿ ಪೊಲೀಸರಿಂದ ‘ಟಿಣಿಂಗ, ಮಿಣಿಂಗ ಟಿಶ್ಯಾ’- ಖುಷಿಯ ಮೂಡ್‌ನಲ್ಲಿ ಖಾಕಿಪಡೆ

police
Published on

ವಿಜಯನಗರ: ದಿನ ನಿತ್ಯದ ಒತ್ತಡದ ನಡುವೆ ನೌಕರರಿಗೆ ಒಂದಿಷ್ಟು ರಿಲ್ಯಾಕ್ಸ್‌ ಮೂಡಿನ ಅವಶ್ಯಕತೆ ಇರುತ್ತದೆ. ಅದರಲ್ಲಿಯೂ ಕಳ್ಳ ಕಾಕರು, ರೌಡಿಗಳು, ಕ್ರೈಂ ಘಟನೆಗಳು... ಹೀಗೆ ಇವುಗಳ ಹಿಂದೆಯೇ ಸದಾ ಬೆನ್ನತ್ತಿ ಹೋಗುವ ಪೊಲೀಸ್‌ ಸಿಬ್ಬಂದಿಗಂತೂ ಒಂದಿಷ್ಟು ಆರಾಮ ಬೇಕೇ ಬೇಕು.

ಇದೇ ಕಾರಣಕ್ಕೆ ವಿಜಯನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಪೊಲೀಸರಿಗಾಗಿ ಕ್ರೀಡಾಕೂಟ ಆಯೋಜಿಸಲಾಗಿತ್ತು. ಇಲ್ಲಿ ಸೇರಿದ್ದ ಪೊಲೀಸ್‌ ಇಲಾಖೆಯ ಸಿಬ್ಬಂದಿ ಸಖತ್ ಸ್ಟೇಪ್ಸ್ ಹಾಕಿ ಮನಸ್ಸನ್ನು ರಿಲ್ಯಾಕ್ಸ್‌ ಮಾಡಿಕೊಂಡರು.

ಇತ್ತೀಚಿನ ದಿನಗಳಲ್ಲಿ ಭಾರಿ ಪ್ರಸಿದ್ಧಿ ಪಡೆದಿರುವ ‘ಟಿಣಿಂಗ, ಮಿಣಿಂಗ ಟಿಶ್ಯಾ’ ಹಾಡು ಸೇರಿದಂತೆ ಟಗರು ಬಂತು, ಟಗರು, ಅಂಟಾವಾ, ಮಾವಾ ಉಹ್ಹೂ ಅಂಟಾವ ಮಾವ ಹಾಡಿಗೆ ಸಖತ್ ಸ್ಟೇಪ್ಸ್ ಹಾಕಿ ಕುಣಿದು ಕುಪ್ಪಳಿಸಿದರು. ಇವರಿಗೆ ಪಿಎಸ್ಐ, ಸಿಪಿಐ, ಸೇರಿದಂತೆ ಇತರೆ ಅಧಿಕಾರಿಗಳು ಕೂಡ ಸಾಥ್ ನೀಡಿದರು.

ಎರಡು ದಿನಗಳ ಕಾಲ ಜಿಲ್ಲಾ ಪೊಲೀಸರ ಕ್ರೀಡಾಕೂಟ ನಡೆಯಲಿದ್ದು, ಮೊದಲ ದಿನ ಪೊಲೀಸರು ತುಂಬಾ ಎಂಜಾಯ್‌ ಮಾಡಿದ್ದು ಕಂಡುಬಂತು. (ದಿಗ್ವಿಜಯ ನ್ಯೂಸ್‌)

ಪೊಲೀಸರು ಸ್ಟೆಪ್‌ ಹಾಕಿರುವ ವಿಡಿಯೋ ಇಲ್ಲಿದೆ ನೋಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net