More

    ಪ್ರಾಣಕ್ಕೆ ಕುತ್ತಾಯ್ತು ಪರೋಪಕಾರ! ಆಡಿನ ಮರಿ ರಕ್ಷಿಸಲು ಹೋಗಿ ಜೀವ ಕಳೆದುಕೊಂಡ ಮಂಗಳೂರು ಯುವಕ

    ಮಂಗಳೂರು: ಆಡಿನ ಮರಿಯೊಂದನ್ನು ರಕ್ಷಿಸಲು ಹೋಗಿ ಪ್ರಾಣವನ್ನೇ ಯುವಕನೊಬ್ಬ ಕಳೆದುಕೊಂಡಿರುವ ದಾರುಣ ಘಟನೆ ಮಂಗಳೂರಿನಲ್ಲಿ ನಡೆದಿದೆ. ರೈಲಿನಲ್ಲಿ ಸಿಲುಕಿದ್ದ ಆಡಿನ ಮರಿ ಪ್ರಾಣವನ್ನು ಕಾಪಾಡಲು ಹೋಗಿದ್ದೇ ಈ ಯುವಕನ ಜೀವಕ್ಕೆ ಕುತ್ತಾಗಿ ಹೋಯ್ತು!

    2021 ಆಗಸ್ಟ್ 28ರಂದು ಜೋಕಟ್ಟೆ ಪರಿಸರದಲ್ಲಿ ರೈಲ್ವೆ ಹಳಿಗೆ ಆಡಿನ ಮರಿಯೊಂದು ಸಿಲುಕಿತ್ತು. ಅತ್ತ ಕಡೆಯಿಂದ ರೈಲಿನ ಶಬ್ದವಾಗುತ್ತಿತ್ತು. ಆದರೆ ಹಳಿಯಲ್ಲಿ ಮರಿಯ ಕಾಲು ಸಿಲುಕಿ ಒದ್ದಾಡುತ್ತಿತ್ತು. ಅಲ್ಲಿಂದಲೇ ಹೋಗುತ್ತಿದ್ದ 21 ವರ್ಷದ ಜೋಕಟ್ಟೆ ಯುವಕ ಚೇತನ್ ಇದನ್ನು ನೋಡಿದ್ದಾನೆ. ಅವನಿಗೆ ಆಡಿನ ಮರಿಯ ಮೇಲೆ ಕನಿಕರ ಹುಟ್ಟಿದೆ. ಅದನ್ನು ಕಾಪಾಡಲು ಹೋಗಿದ್ದಾನೆ.

    ಅದನ್ನು ರಕ್ಷಿಸುತ್ತಿರುವಾಗಲೇ ರೈಲು ಬಂದುಬಿಟ್ಟಿದೆ. ಚೇತನ್‌ ಕಾಲಿನ ಮೇಲೆ ರೈಲು ಹರಿದ ಕಾರಣ, ಎರಡೂ ಕಾಲುಗಳು ಛಿದ್ರ ಛಿದ್ರವಾಗಿದ್ದವು. ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಕಾಲುಗಳನ್ನು ಕಟ್‌ ಮಾಡಲಾಗಿತ್ತು.
    ಆಸ್ಪತ್ರೆಯಿಂದ ಮನೆಗೆ ಬಂದಿದ್ದ ಚೇತನ್‌ ಎರಡೂ ಕಾಲುಗಳನ್ನು ಕಳೆದುಕೊಂಡು ಖಿನ್ನತೆಗೆ ಜಾರಿದ್ದ. ಖಾಸಗಿ ಬಸ್‌ನಲ್ಲಿ ಕ್ಲೀನರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಚೇತನ್‌ ಕುಟುಂಬದ ಆಧಾರವಾಗಿದ್ದ. ಆದರೆ ಈಗ ಕೆಲಸಕ್ಕೂ ಹೋಗಲಾರದ ಸ್ಥಿತಿಯಲ್ಲಿ ಎಲ್ಲದಕ್ಕೂ ಕುಟುಂಬಸ್ಥರನ್ನು ಅವಲಂಬಿಸಬೇಕಾಗಿ ಬಂದಿದ್ದರಿಂದ ಆತ ಮಾನಸಿಕವಾಗಿ ನರಳತೊಡಗಿದ. ನಂತರ ಅನಾರೋಗ್ಯ ತೀವ್ರವಾಗಿ ಬಾಧಿಸಿತ್ತು. ಆತನನ್ನು ಪುನಃ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

    ಆದರೆ ಚಿಕಿತ್ಸೆ ಫಲಕಾರಿಯಾಗದೇ ಚೇತನ್‌ ಮೃತಪಟ್ಟಿದ್ದಾನೆ. ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಆತನನ್ನು ಬದುಕಿಸಿಕೊಳ್ಳಲು ಗೆಳೆಯರು ಬೀದಿ ಬದಿ ಹಣ ಸಂಗ್ರಹಿಸಿದಲ್ಲದೆ, ದಾನಿಗಳು ತಮ್ಮಿಂದಾದಷ್ಟು ಹಣ ನೀಡಿ ಸಹಕರಿಸಿದ್ದರು. ಆದರೆ ಯಾವುದೂ ಫಲ ಕೊಡಲಿಲ್ಲ.

    ಎಟಿಎಂ ವಿತ್‌ಡ್ರಾ, ಫುಡ್‌ ಆರ್ಡರ್‌, ಓಲಾ ಜೇಬಿಗೆ ಭಾರ: ಬ್ಯಾಂಕ್‌ ಲಾಕರ್‌ ಗ್ರಾಹಕ ನಿರಾಳ- ಆರು ಹೊಸ ರೂಲ್ಸ್‌ ಇಲ್ಲಿವೆ

    VIDEO: ಆಕಾಶದಿಂದ ಸುರಿಯಿತು ಮೀನುಗಳು ಮಳೆ: ರಸ್ತೆಯ ತುಂಬಾ ವಿಲವಿಲ… ನಂಬಲಸಾಧ್ಯವಾದ ವಿಡಿಯೋ ವೈರಲ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts