

ಮುಂಬೈ: ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅಹಮದಾಬಾದ್ನಿಂದ ಮುಂಬೈಗೆ ಮರ್ಸಿಡಿಸ್ ಕಾರಿನಲ್ಲಿ ಹೋಗುವ ಸಂದರ್ಭದಲ್ಲಿ ಮುಂಬೈ ಸಮೀಪ ಪಾಲ್ಘರ್ನಲ್ಲಿ ಅಪಘಾತ ಸಂಭವಿಸಿದೆ.
ಮಿಸ್ತ್ರಿ ಜತೆಗೆ ಪ್ರಯಾಣಿಸುತ್ತಿದ್ದ ಇನ್ನಿಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಗುಜರಾತ್ನ ಆಸ್ಪತ್ರೆಗೆ ರವಾನಿಸಲಾಗಿದೆ. ಮಧ್ಯಾಹ್ನ 3.15ರ ಸುಮಾರಿಗೆ ಅಪಘಾತ ನಡೆದಿದೆ. ಸೂರ್ಯ ನದಿಯ ಮೇಲೆ ನಿರ್ಮಿಸಲಾಗಿರುವ ಸೇತುವೆಯಲ್ಲಿ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಸೈರಸ್ ಮಿಸ್ತ್ರಿ ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಮಿಸ್ತ್ರಿಯವರ ಹಿನ್ನೆಲೆ:
ಸೈರಸ್ ಪಲ್ಲೋಂಜಿ ಮಿಸ್ತ್ರಿ (ಜನನ 4 ಜುಲೈ 1968) ಭಾರತೀಯ ಮೂಲದ ಐರಿಷ್ ಉದ್ಯಮಿ. ಅವರು 2012 ರಿಂದ 2016 ರವರೆಗೆ ಭಾರತೀಯ ವಾಣಿಜ್ಯ ಸಮೂಹವಾದ ಟಾಟಾ ಗ್ರೂಪ್ನ ಅಧ್ಯಕ್ಷರಾಗಿದ್ದರು. ರತನ್ ಟಾಟಾ ಅವರು ನಿವೃತ್ತಿ ಘೋಷಿಸಿದ ನಂತರ ಸೈರಸ್ ಮಿಸ್ತ್ರಿ ಅವರು 2012ರ ಡಿಸೆಂಬರ್ನಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಎನ್.ಚಂದ್ರಶೇಖರನ್ ನಂತರ ಟಾಟಾ ಸನ್ಸ್ನ ಕಾರ್ಯಕಾರಿ ಅಧ್ಯಕ್ಷರಾಗಿ ಅವರು ಅಧಿಕಾರ ಸ್ವೀಕರಿಸಿದ್ದರು.
2016ರ ಅಕ್ಟೋಬರ್ನಲ್ಲಿ ಟಾಟಾ ಗ್ರೂಪ್ನ ಹೋಲ್ಡಿಂಗ್ ಕಂಪೆನಿಯು ಮಿಸ್ತ್ರಿ ಅವರಿಗೆ ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡುವ ಅವಕಾಶವನ್ನು ನೀಡಿತ್ತು. ನಂತರ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲು ಮತ ಚಲಾಯಿಸಿತು.
ಇವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕುವ ಟಾಟಾ ಸಮೂಹದ ನಿರ್ಧಾರವನ್ನು ಸುಪ್ರೀಂಕೋರ್ಟ್ನಲ್ಲಿ ಸಪೂರ್ಜಿ ಪಲ್ಲೊಂಜಿ (ಎಸ್ಪಿ) ಪ್ರಶ್ನಿಸಿತ್ತು. ಆದರೆ ಅಲ್ಲಿ ಅರ್ಜಿ ವಜಾಗೊಂಡಿತ್ತು.
ಅಪಘಾತಗೊಂಡ ಕಾರಿನ ವಿಡಿಯೋ