More

    ಸ್ವಿಗ್ಗಿಯಲ್ಲಿ ಆಹಾರಕ್ಕಿಂತ ಹೆಚ್ಚಾಗಿ ಜನರು ತರಿಸಿಕೊಂಡಿರೋದು ಇದನ್ನಂತೆ! ಕೇಳಿದ್ರೆ ‘ಛೀ’ ಅಂತೀರಾ…

    ಮುಂಬೈ: ಈಗಂತೂ ಎಲ್ಲದಕ್ಕೂ ಆನ್​ಲೈನ್​ ಮೊರೆ ಹೋಗುವುದು ಸಹಜ. ಮನೆ ಬಾಗಿಲಿಗೇ ಬೇಕಾದ ಆಹಾರ ಪದಾರ್ಥ ಸೇರಿದಂತೆ ಬೇಕಾಗಿದ್ದೆಲ್ಲವೂ ಲಭ್ಯವಾಗುತ್ತೆ ಎಂದು ಕೆಲ ವರ್ಷಗಳ ಹಿಂದೆ ಯಾರೂ ಊಹಿಸಿರಲಿಕ್ಕಿಲ್ಲ. ಆದರೆ ಈಗ ಎಲ್ಲವೂ ಸಾಧ್ಯವಾಗಿವೆ. ಅದಕ್ಕಾಗಿ ಆ್ಯಪ್​ಗಳು ಹುಟ್ಟಿಕೊಂಡಿವೆ.

    ಅದರಲ್ಲಿ ಒಂದು ಸ್ವಿಗ್ಗಿ. ಸ್ವಿಗ್ಗಿ ಫುಡ್​ ಡೆಲವರಿ ಆ್ಯಪ್​ ಸೇರಿದಂತೆ ವಿವಿಧ ವಸ್ತುಗಳನ್ನು ಸರಬರಾಜು ಮಾಡಲು ಇನ್​ಸ್ಟಾಮಾರ್ಟ್​ ಆ್ಯಪ್​ ಕೂಡ ಇದೆ. ಆದರೆ ಇದು ಅಹಾರದ ಆ್ಯಪ್​ ಎಂದೇ ಹೆಚ್ಚು ಪ್ರಚಲಿತವಾಗಿರುವ ಕಾರಣ, ಜನರು ಸ್ವಿಗ್ಗಿಯಲ್ಲಿ ಆಹಾರ ಪದಾರ್ಥಗಳನ್ನು ಆರ್ಡರ್​ ಮಾಡುವುದೇ ಹೆಚ್ಚು.

    ಆದರೆ ಅಚ್ಚರಿಯ ಸಂಗತಿ ಎಂದರೆ, ಆಹಾರಕ್ಕಿಂತಲೂ ಹೆಚ್ಚಾಗಿ ಮುಂಬೈ ಮಂದಿ ಇದರಲ್ಲಿ ತರಿಸಿಕೊಳ್ಳುವುದು ಏನು ಎಂದು ಕೇಳಿದರೆ ಶಾಕ್​ ಆಗೋದು ಗ್ಯಾರೆಂಟಿ.

    ಸ್ವಿಗ್ಗಿ ಡೆಲಿವರಿ ಆ್ಯಪ್, ಬೆಂಗಳೂರು, ಮುಂಬೈ, ಹೈದರಾಬಾದ್, ದೆಹಲಿ ಮತ್ತು ಚೆನ್ನೈ ಸೇರಿದಂತೆ ಮೆಟ್ರೋ ನಗರಗಳಲ್ಲಿ ವಾಸಿಸುವ ಜನರು ಏನನ್ನು ಹೆಚ್ಚಿಗೆ ಆರ್ಡರ್​ ಮಾಡುತ್ತಾರೆ ಎನ್ನುವ ಬಗ್ಗೆ ಸಮೀಕ್ಷೆ ಮಾಡಿದೆ. ಉಳಿದೆಡೆಗಳಲ್ಲಿ ಬೇರೆಯವುದಕ್ಕಿಂತ ಆಹಾರವನ್ನೇ ಹೆಚ್ಚಾಗಿ ಆರ್ಡರ್​ ಮಾಡಿದರೆ, ಮುಂಬೈ ಜನ ಮಾತ್ರ ಕಳೆದ 12 ತಿಂಗಳಲ್ಲಿ ಹಿಂದಿನ ವರ್ಷಕ್ಕಿಂತ 570 ಪಟ್ಟು ಹೆಚ್ಚು ಕಾಂಡೋಮ್‍ಗಳನ್ನು ಆರ್ಡರ್ ಮಾಡಿದ್ದಾರಂತೆ!

    ಉಳಿದ ಕಡೆಗಳಲ್ಲಿ, ಕಳೆದ ವರ್ಷ ಏಪ್ರಿಲ್‍ನಿಂದ ಜೂನ್‍ವರೆಗೆ ಐಸ್‍ಕ್ರೀಮ್ ಬೇಡಿಕೆಯು ಶೇಕಡಾ 42 ರಷ್ಟು ಹೆಚ್ಚಾಗಿತ್ತು. ಅದರಲ್ಲಿಯೂ ಹೆಚ್ಚಿನ ಆರ್ಡರ್‌ಗಳು ರಾತ್ರಿ 10 ಗಂಟೆಯ ನಂತರ ಮಾಡಲಾಗಿದೆ ಎಂದು ಸಮೀಕ್ಷೆ ಹೇಳಿದೆ. ಹೈದರಾಬಾದ್ ಜನರು ಬೇಸಿಗೆಯಲ್ಲಿ ಸುಮಾರು 27,000 ತಾಜಾ ಜ್ಯೂಸ್ ಬಾಟಲಿಗಳನ್ನು ಆರ್ಡರ್ ಮಾಡಿದ್ದಾರೆ. 2021ರಲ್ಲಿ ಮಹಾನಗರಗಳಲ್ಲಿ 5 ಕೋಟಿ ಮೊಟ್ಟೆಗಳನ್ನು ಆರ್ಡರ್ ಮಾಡಲಾಗಿದೆ ಎಂದು ಸಮೀಕ್ಷೆ ಹೇಳಿದೆ.

    ಇನ್ನು ಬೆಂಗಳೂರಿನ ಮಟ್ಟಿಗೆ ಹೇಳುವುದಾದರೆ, ಬೆಂಗಳೂರಿಗರು, ಸೋಯಾ ಮತ್ತು ಓಟ್ ಡೈರಿ ಮಿಲ್ಕ್ ಅನ್ನು ಹೆಚ್ಚಾಗಿ ಆರ್ಡರ್ ಮಾಡಿದ್ದಾರೆ. ಅದರಲ್ಲಿಯೂ 30 ದಶಲಕ್ಷ ಆರ್ಡರ್‌ಗಳು ಬೆಂಗಳೂರು ಮತ್ತು ಮುಂಬೈನಲ್ಲಿ ಬೆಳಗಿನ ಹೊತ್ತಿನಲ್ಲಿ ಮಾಡಲಾಗಿದೆ. ಊಟದ ಸಮಯದಲ್ಲಿ ಹೆಚ್ಚಾಗಿ ಅವಲಕ್ಕಿ ಮತ್ತು ರವೆಯನ್ನು ಬೆಂಗಳೂರು, ಮುಂಬೈ ಮತ್ತು ದೆಹಲಿಯ ನಗರಗಳಲ್ಲಿರುವ ಜನರು ಆರ್ಡರ್ ಮಾಡಿದ್ದರು ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.

    ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಹಸಿರು ಮೆಣಸಿನಕಾಯಿಗೆ ಹೆಚ್ಚಿನ ಆರ್ಡರ್‌ಗಳಿವೆ. ಇದರ ಹೊರತಾಗಿ, ಈ ಬಾರಿ ಬೆಂಗಳೂರು, ಮುಂಬೈ, ಹೈದರಾಬಾದ್, ಚೆನ್ನೈ, ದೆಹಲಿಯಲ್ಲಿ ಸ್ಯಾನಿಟರಿ ನ್ಯಾಪ್‍ಕಿನ್‍ಗಳು, ಬ್ಯಾಂಡೇಜ್‍ಗಳು ಇತ್ಯಾದಿಗಳ ಹೆಚ್ಚು ಆರ್ಡರ್ ಆಗಿವೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ. (ಏಜೆನ್ಸೀಸ್​)

    ಮದ್ವೆ ನಂತರ ತೂಕ ಹೆಚ್ಚಾಯ್ತೆಂದು ತಲಾಖ್​! ಪತಿ ವಿರುದ್ಧ ಪೊಲೀಸರಿಗೆ ದೂರು ನೀಡಿದ ಪತ್ನಿ

    ತಿಮ್ಮಪ್ಪನ ಭಕ್ತನಿಗೆ ಸಿಗದ ಸೇವೆ! ಟಿಟಿಡಿಗೆ ಬಂತು ಗ್ರಹಚಾರ- 45 ಲಕ್ಷ ರೂ. ಪರಿಹಾರಕ್ಕೆ ಆದೇಶ

    ನನ್ನ ಸಾವಿಗೆ ಬಿಜೆಪಿ ಮುಖಂಡ ಹಾಗೂ ಪಿಎಸ್​ಐ ಕಾರಣ ಎಂದು ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ!

    ಸಿಎಂ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಬಿಗ್​ ಶಾಕ್!​ 3,500 ಕೋಟಿ ರೂ. ದಂಡ ವಿಧಿಸಿದ ಎನ್​ಜಿಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts