ಕೋವಿಡ್‌ಗೆ ಬಲಿಯಾದವರಿಗೆ ಚಿರನೆನಪಿನ ಶ್ರದ್ಧಾಂಜಲಿ: ಚಿತಾಭಸ್ಮದಲ್ಲಿ ಉದ್ಯಾನ ಅಭಿವೃದ್ಧಿ

ash
Published on

ಭೋಪಾಲ್: ಕೋವಿಡ್‌ 2ನೇ ಅಲೆಯಲ್ಲಿ ಮೃತಪಟ್ಟವರು ಅತ್ಯಧಿಕ ಮಂದಿ. ಆದರೆ ಹೆಚ್ಚಿನ ಕುಟುಂಬದವರು ಸೋಂಕಿನ ಭೀತಿಯಿಂದ ಚಿತಾಭಸ್ಮವನ್ನು ಪಡೆಯಲು ಬಂದೇ ಇಲ್ಲ. ಆದ್ದರಿಂದ ಚಿತಾಭಸ್ಮವನ್ನು ವಿಸರ್ಜನೆ ಮಾಡುವುದೇ ಕಷ್ಟಕರವಾಗಿದೆ. ಈ ಚಿತಾಭಸ್ಮವನ್ನು ನದಿಗೆ ಬಿಡುವುದರಿಂದ ನದಿ ನೀರು ಕಲುಷಿತವಾಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಅವರ ಚಿತಾಭಸ್ಮವನ್ನು ಸ್ಮಶಾನದ ಉದ್ಯಾನ ಅಭಿವೃದ್ಧಿಪಡಿಸಲು ಬಳಕೆ ಮಾಡುತ್ತಿರುವ ಕಾರ್ಯಕ್ಕೆ ಭೋಪಾಲ್‌ ಸರ್ಕಾರ ಮುಂದಾಗಿದೆ.

ಸದ್ಯ ಇಲ್ಲಿಯ ಸ್ಮಶಾನದಲ್ಲಿ ಹೀಗ 21 ಟ್ರಕ್ ಲೋಡ್ ಚಿತಾಭಸ್ಮವಿದೆ. ಇದನ್ನು ಸಮೀಪದ ನರ್ಮದಾ ನದಿಗೆ ಬಿಡುವುದು ಕಷ್ಟಕರ ಮಾತ್ರವಲ್ಲದೇ ಪರಿಸರ ಸ್ನೇಹಿ ಕೂಡ ಅಲ್ಲ, ಹೀಗೆ ಮಾಡುವುದರಿಂದ ನರ್ಮದೆಯ ನೀರು ಕಲುಷಿತಗೊಳ್ಳಬಹುದು ಎಂದು ಅಂದುಕೊಂಡ ಸರ್ಕಾರ, ಇದನ್ನು ಹಿಂದೂಗಳ ಸ್ಮಶಾನದಲ್ಲಿನ ಉದ್ಯಾನ ಅಭಿವೃದ್ಧಿಪಡಿಸುವುದಕ್ಕೆ ನಿರ್ಧಾರ ತೆಗೆದುಕೊಂಡಿದೆ.

ಬಾಬಾದಾ ವಿಶ್ರಮ್ ಘಾಟ್ ನಲ್ಲಿ 21 ಟ್ರಕ್ ಲೋಡ್ ಸತ್ತವರ ಚಿತಾಭಸ್ಮ ಬಳಸಿಕೊಳ್ಳಲಾಗುತ್ತದೆ. ಕರೊನಾದಿಂದ ಮೃತಪಟ್ಟವರ ಚಿತಾಭಸ್ಮವನ್ನು ಮೃತನ ಕುಟುಂಬಸ್ಥರು ಸಂಗ್ರಹಿಸಿಲ್ಲ. ಕಾರಣ ಕರೊನಾ ಪ್ರೇರಿತ ನಿರ್ಬಂಧಗಳು ಮತ್ತು ಅದರ ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಲು ಸಾಧ್ಯವಾಗಿಲ್ಲ, ಆದ್ದರಿಂದ ಈ ಕಾರ್ಯಕ್ಕೆ ಮುಂದಾಗಿದ್ದೇವೆ. ಈ ರೀತಿ ಮಾಡುವುದರಿಂದ ಉದ್ಯಾನದ ಅಭಿವೃದ್ಧಿಯ ಜತೆಗೆ, ಒಂದೊಳ್ಳೆ ಕಾರ್ಯಕ್ಕೆ ಚಿತಾಭಸ್ಮ ಬಳಕೆ ಆಗಿರುವುದರಿಂದ ಕರೊನಾದಿಂದ ಮೃತಪಟ್ಟವರಿಗೂ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ ಎಂದು ಉದ್ಯಾನ ನಿರ್ವಹಣಾ ಸಮಿತಿಯ ಕಾರ್ಯದರ್ಶಿ ಮಮತೇಶ್ ಶರ್ಮಾ ವಿವರಿಸಿದ್ದಾರೆ.

ಈ ಸ್ಮಶಾನದಲ್ಲಿ ಮಾರ್ಚ್ 15ರಿಂದ ಜೂನ್ 15ರವರೆಗಿನ 90 ದಿನಗಳ ಅವಧಿಯಲ್ಲಿ ಆರು ಸಾವಿರಕ್ಕೂ ಅಧಿಕ ಸೋಂಕಿತರ ಅಂತ್ಯಕ್ರಿಯೆ ನಡೆದಿದೆ. ಇವರ ಚಿತಾಭಸ್ಮದಿಂದ 12 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಉದ್ಯಾನವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net