‘ಐ ಲವ್‌ ಯೂ’ ಎಂದು ಒಂದು ಸಲ ಹೇಳಿದ್ರೆ ಅದೇನು ಆಕೆಗೆ ಅವಮಾನ ಮಾಡಿದಂತಲ್ಲ ಎಂದ ಕೋರ್ಟ್‌

proposal
Published on

ಮುಂಬೈ: ಒಬ್ಬ ಹುಡುಗ, ಒಬ್ಬಳು ಹುಡುಗಿ ಬಳಿ ಹೋಗಿ ಒಂದು ಬಾರಿ “ಐ ಲವ್ ಯೂ” ಎಂದು ಹೇಳಿದ ಮಾತ್ರಕ್ಕೆ ಅದು ಆಕೆಯ ನಮ್ರತೆಗೆ ಉದ್ದೇಶಪೂರ್ವಕ ಅವಮಾನ ಮಾಡಿದಂತೆ ಅಲ್ಲ. ಹೆಚ್ಚೆಂದರೆ ಅದು ಪ್ರೀತಿಯ ಭಾವನೆಯನ್ನು ವ್ಯಕ್ತಪಡಿಸುತ್ತದೆ ಎಂದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕೋರ್ಟ್‌ ಹೇಳಿದೆ.

17 ವರ್ಷದ ಬಾಲಕಿಯೊಬ್ಬಳಿಗೆ ಕಣ್ಣು ಹೊಡೆದು ಆಕೆಯ ಬಳಿ ಹೋಗಿ ಐ ಲವ್‌ ಯೂ ಎಂದಿದ್ದ 23 ವರ್ಷದ ಯುವಕನನ್ನು ಆರೋಪಮುಕ್ತಗೊಳಿಸಿದ ನ್ಯಾಯಾಲಯವು, ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದೆ.

ಹೇಳಿದ ವಿಶೇಷ ನ್ಯಾಯಾಲಯವು ಪೋಕ್ಸೊ ಕಾಯಿದೆಯಡಿಯಲ್ಲಿ ಕೇಸು ದಾಖಲಿಸಲಾದ 23 ವರ್ಷದ ಯುವಕನನ್ನು ಖುಲಾಸೆಗೊಳಿಸಿದೆ. ವಿಶೇಷ ನ್ಯಾಯಾಧೀಶೆ ಕಲ್ಪನಾ ಪಾಟೀಲ್ ಅವರು ಮಂಗಳವಾರ ವಿಚಾರಣೆ ಮಾಡಿದ್ದು, ಬುಧವಾರ ವಿವರವಾದ ಆದೇಶ ಲಭ್ಯವಾಗಿದೆ. 17 ವರ್ಷದ ಸಂತ್ರಸ್ತೆಯ ಕುಟುಂಬದವರು ನೀಡಿದ ದೂರಿನ ಪ್ರಕಾರ,

ಬಾಲಕಿಯ ಪಾಲಕರು ಮಾಡಿದ್ದ ಆರೋಪ ಏನೆಂದರೆ: ಆರೋಪಿ ಯುವಕ 2016 ರಲ್ಲಿ ತಮ್ಮ ನಿವಾಸದ ಬಳಿ ಹುಡುಗಿಯನ್ನು ಪ್ರೀತಿಸುವುದಾಗಿ ಹೇಳಿದ್ದ. ಅಷ್ಟೇ ಅಲ್ಲದೇ ಆತ ಬಾಲಕಿಯನ್ನು ಗುರಾಯಿಸಿದ್ದಾನೆ ಮತ್ತು ಕಣ್ಣು ಹೊಡೆದಿದ್ದಾನೆ. ನಂತರ ಆಕೆಯ ತಾಯಿಗೆ ಬೆದರಿಕೆಯನ್ನು ಹಾಕಿದ್ದಾನೆ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಯುವಕನ ವಿರುದ್ಧ ದೂರು ದಾಖಲು ಮಾಡಿದ್ದರು. ಆಗಿನ್ನೂ ಯುವಕ ಅಪ್ರಾಪ್ತನಾಗಿದ್ದ ಹಿನ್ನೆಲೆಯಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯ ಅಡಿ ಆತನನ್ನು ಬಂಧಿಸಲಾಗಿತ್ತು.

ಇದರ ವಿಚಾರಣೆ ಸುದೀರ್ಘವಾಗಿ ನಡೆದು ಇದೀಗ ಆದೇಶ ಹೊರಬಿದ್ದಿದೆ. ಆರೋಪಿಯು ಲೈಂಗಿಕ ಉದ್ದೇಶದಿಂದ ಸಂತ್ರಸ್ತೆಗೆ ಸಂಬಂಧಿಸಿದಂತೆ ಯಾವುದೇ ಕೃತ್ಯ ಎಸಗಿದ್ದಾನೆ ಅಥವಾ ಸಂತ್ರಸ್ತೆ ಅಥವಾ ಆಕೆಯ ತಾಯಿಗೆ ಯಾವುದೇ ರೀತಿಯ ಬೆದರಿಕೆಯನ್ನು ನೀಡಿದ್ದಾನೆ ಎಂಬುದಕ್ಕೆ ಯಾವುದೇ ಸಾಕ್ಷ್ಯವನ್ನು ಪ್ರಾಸಿಕ್ಯೂಷನ್ ದಾಖಲಿಸಿಲ್ಲ. ಸಂತ್ರಸ್ತೆಗೆ ಐ ಲವ್ ಯೂ ಹೇಳುವ ಒಂದೇ ಒಂದು ಘಟನೆಯು ಸಂತ್ರಸ್ತೆಯ ಮೇಲೆ ಆರೋಪಿಯ ಪ್ರೀತಿಯ ಭಾವನೆಯನ್ನು ವ್ಯಕ್ತಪಡಿಸುತ್ತದೆ. ಸಂತ್ರಸ್ತೆಯ ನಮ್ರತೆಯನ್ನು ಅವಮಾನಿಸುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ಹೇಳಲಾಗದು ಎಂದು ನ್ಯಾಯಾಧೀಶೆ ಕಲ್ಪನಾ ಪಾಟೀಲ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net