ಕರೊನಾಕ್ಕೆ ಮತ್ತೆ ಬೆಚ್ಚಿಬಿದ್ದ ಚೀನಾ: ಜೀವಂತ ವ್ಯಕ್ತಿಯನ್ನೇ ಶವಾಗಾರಕ್ಕೆ ಒಯ್ದ ನರ್ಸಿಂಗ್​ ಹೋಮ್​!

corona
Published on

ಶಾಂಘೈ (ಚೀನಾ): ಕರೊನಾದ ತವರು ಚೀನಾದಲ್ಲಿ ಮತ್ತೆ ವೈರಲ್​ ತಾಂಡವಾಡುತ್ತಿದೆ. ಕರೊನಾ ನಾಲ್ಕನೆಯ ಅಲೆಗೆ ಇಡೀ ದೇಶ ಬೆಚ್ಚಿಬಿದ್ದಿದೆ. ಅದರಲ್ಲಿಯೂ ಶಾಂಘೈನಲ್ಲಿ ಕರೊನಾಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ವಿಪರೀತ ಪ್ರಮಾಣದಲ್ಲಿ ಏರಿಕೆ ಆಗಿದೆ.

ಒಂದನೆಯ ಅಲೆಯಲ್ಲಿ ಸೃಷ್ಟಿಸಿರುವ ಅಲ್ಲೋಲ ಕಲ್ಲೋಲ ಪುನಃ ಚೀನಾದಲ್ಲಿ ಸೃಷ್ಟಿಸಿಯಾಗಿದ್ದು, ಜೀವಂತ ವ್ಯಕ್ತಿಯನ್ನು ಶವಾಗಾರಕ್ಕೆ ಕಳುಹಿಸಿರುವ ವಿಷಯವೀಗ ಭಾರಿ ವೈರಲ್​ ಆಗಿದೆ. ಸೋಂಕಿತರ ಪ್ರಮಾಣ ಏರುಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಸಂಪೂರ್ಣ ಕೋಲಾಲಹ ಸೃಷ್ಟಿಯಾಗಿದೆ. ಶಾಂಘೈ ನರ್ಸಿಂಗ್ ಹೋಮ್ ನಿವಾಸಿಯನ್ನು ಜೀವಂತವಾಗಿದ್ದಾಗ ತಪ್ಪಾಗಿ ಶವಾಗಾರಕ್ಕೆ ಕರೆದೊಯ್ಯಲಾಗಿದೆ.

ಈ ಕುರಿತು ಚೀನಾ ಸರ್ಕಾರ ತನಿಖೆಗೆ ಆದೇಶಿಸಿರುವುದಾಗಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಜೀವಂತ ವ್ಯಕ್ತಿಯನ್ನು ಶವಾಗಾರಕ್ಕೆ ಕಳುಹಿಸಿರುವ ಕುರಿತಾಗಿ ನರ್ಸಿಂಗ್ ಹೋಮ್ ಕ್ಷಮೆಯಾಚಿಸಿದರೂ, ದೇಶ ವ್ಯಾಪಿ ?ಭಾರಿ ಆಕ್ರೋಶ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ನರ್ಸಿಂಗ್ ಹೋಮ್‌ನ ನಿರ್ದೇಶಕರು ಮತ್ತು ಜಿಲ್ಲಾ ನಾಗರಿಕ ವ್ಯವಹಾರಗಳ ಬ್ಯೂರೋ ಮತ್ತು ಸಾಮಾಜಿಕ ಅಭಿವೃದ್ಧಿ ಕಚೇರಿಯ ಮೂವರು ಅಧಿಕಾರಿಗಳು ಸೇರಿದಂತೆ ನಾಲ್ವರನ್ನು ನಂತರ ಅವರ ಸ್ಥಾನಗಳಿಂದ ವಜಾಗೊಳಿಸಲಾಗಿದೆ. ಮಾತ್ರವಲ್ಲದೇ ನರ್ಸಿಂಗ್​ ಹೋಂನ ವೈದ್ಯರ ಲೈಸೆನ್ಸ್​ ರದ್ದು ಮಾಡಲಾಗಿದೆ.

ಈ ನಡುವೆಯೇ ಶಾಂಘೈನಲ್ಲಿ ಐದನೆಯ ವಾರವೂ ಲಾಕ್​ಡೌನ್​ ಮುಂದುವರೆದಿದೆ. ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net