ಪ್ಯಾಂಟಿನೊಳಗೆ ಹಾವು: ರಾತ್ರಿಯಿಡೀ ಕದಲದೇ ಕಳೆದ! ವಿಡಿಯೋ ನೋಡಿ

snake
Published on

ಮಿರ್ಜಾಪುರ (ಉತ್ತರ ಪ್ರದೇಶ): ಯುವಕನ ಪ್ಯಾಂಟಿನೊಳಕ್ಕೆ ಹಾವು ಹೊಕ್ಕಿಹೊಂಡು ಇಡೀ ರಾತ್ರಿ ಯುವಕ ಅಲುಗಾಡದೇ ನಿಂತುಕೊಂಡಿರುವ ಭಯಾನಕ ಘಟನೆ ಉತ್ತರ ಪ್ರದೇಶ ಮಿರ್ಜಾಪುರದ ಸಿಕಂದರಪುರ ಗ್ರಾಮದಲ್ಲಿ ನಡೆದಿದೆ.

ಇಂಥದ್ದೊಂದು ನರಕಯಾತನೆ ಅನುಭವಿಸಿರುವ ಯುವಕನ ಹೆಸರು ಲವಲೇಶ್‌. ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಲವಲೇಶ್‌ಗೆ ಗೊತ್ತಿಲ್ಲದ್ದಂತೆಯೇ ನಿಧಾನವಾಗಿ ಹಾವು ಹೊಕ್ಕಿಕೊಂಡುಬಿಟ್ಟಿದೆ. ಹಾವು ಎಂದು ತಿಳಿಯುತ್ತಲೇ ಅಕ್ಷರಶಃ ಬೆಚ್ಚಿಬಿದ್ದ ಯುವಕ, ಏನು ಮಾಡಬೇಕು ಎನ್ನುವುದು ತೋಚದೇ ಕಂಗಾಲಾಗಿ ಹೋಗಿದ್ದಾನೆ.

ಇದು ನಡೆದದ್ದು ಹೇಗೆಂದರೆ, ಸಿಕಂದರಪುರ ಗ್ರಾಮದಲ್ಲಿ ವಿದ್ಯುತ್ ಕಂಬ, ವೈರ್ ಅಳವಡಿಸುವ ಕಾಮಗಾರಿ ನಡೆಯುತ್ತಿತ್ತು. ಸಹ ಕಾರ್ಮಿಕರೊಂದಿಗೆ ಅಂಗನವಾಡಿ ಕೇಂದ್ರದಲ್ಲಿ ಲವಲೇಸ್‌ ಕೂಡ ರಾತ್ರಿ ಮಲಗಿಕೊಂಡಿದ್ದ.

ಅಲ್ಲಿಯೇ ಸಮೀಪವಿದ್ದ ಹಾವು ಅದ್ಹೇಗೋ ಲವಲೇಶ್‌ ಪ್ಯಾಂಟ್‌ ಒಳಗೆ ಹೊಕ್ಕಿಬಿಟ್ಟಿದೆ. ಗಾಢ ನಿದ್ರೆಯಲ್ಲಿದ್ದ ಯುವಕನಿಗೆ ಹಾವು ಹೊಕ್ಕಿದ್ದು ತಿಳಿದಿದೆ. ಆದರೆ ಏನೂ ಮಾಡದ ಸ್ಥಿತಿ. ಏಕೆಂದರೆ. ಸ್ವಲ್ಪವೇ ಅತ್ತಿತ್ತ ಅಲುಗಾಡಿದರೂ ಹಾವು ಕಚ್ಚಿ ಪ್ರಾಣ ಕಳೆದುಕೊಳ್ಳುವ ಅಪಾಯ.

ಇದೇ ಕಾರಣಕ್ಕೆ ಏಳು ಗಂಟೆ ಆತ ಸ್ವಲ್ಪವೂ ಕದಲದೆ ಕಂಬಕ್ಕೆ ಒರಗಿ ನಿಂತಿದ್ದಾನೆ. ಬೆಳಕು ಹರಿದ ಮೇಲೆ ತನ್ನ ಸ್ನೇಹಿತರಿಗೆ ಈ ವಿಷಯ ತಿಳಿಸಿದ್ದಾನೆ. ನಂತರ ಅವರು ಹಾವು ಹಿಡಿಯುವ ವ್ಯಕ್ತಿಯನ್ನು ಕರೆತಂದಿದ್ದಾರೆ. ನಿಧಾನವಾಗಿ ಹಾವನ್ನು ಹೊರಕ್ಕೆ ತೆಗೆಯಲಾಗಿದೆ.

ಹಾವನ್ನು ಹೊರಕ್ಕೆ ತೆಗೆಯುವ ವೇಳೆ ಮುನ್ನೆಚ್ಚರಿಕೆಯ ಕ್ರಮವಾಗಿ ಅಂಬ್ಯುಲೆನ್ಸ್‌ ಕೂಡ ಕರೆಸಲಾಗಿತ್ತು. ಆದರೆ, ಅದೃಷ್ಟವಶಾತ್ ಹಾವು ಯುವಕನನ್ನು ಕಚ್ಚಿಲ್ಲದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net