More

    ಶೀಘ್ರ ಓಡಲಿವೆ ಏಳು ಹೈಸ್ಪೀಡ್‌ ರೈಲು: ಮಾರ್ಗಗಳು ಯಾವುವು ಗೊತ್ತಾ?

    ನವದೆಹಲಿ: ಹೈಸ್ಪೀಡ್‌ ರೈಲಿನ ಯೋಜನೆ ಕರೊನಾ ವೈರಸ್‌ ಕಾಟ ಉಂಟಾದ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಇದಕ್ಕೆ ಜೀವ ಸಿಕ್ಕಿದೆ.

    ದೇಶಾದ್ಯಂತ ಹೈಸ್ಪೀಡ್ ರೈಲುಗಳ ಸಂಚಾರದ ಕುರಿತಂತೆ ಸರ್ಕಾರ ಈಗಾಗಲೇ ಕಾರ್ಯಪ್ರವೃತ್ತವಾಗಿದ್ದು, ಶೀಘ್ರದಲ್ಲಿ ಏಳು ಮಾರ್ಗಗಳಲ್ಲಿ ರೈಲು ಆರಂಭವಾಗಿದೆ. ಈ ಯೋಜನೆಗಾಗಿ ದೇಶಾದ್ಯಂತ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳ ಜತೆಗೆ ಹೊಸ ಹಳಿಗಳನ್ನು ನಿರ್ಮಿಸುವ ಪ್ರಕ್ರಿಯೆಗೂ ಚಾಲನೆ ಸಿಗಲಿದೆ.

    ರೈಲಿನ ಹಳಿಗಳ ನಿರ್ಮಾಣಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳ ಪಕ್ಕದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಿದ್ದು, ಇದಕ್ಕಾಗಿ ಸಮಿತಿಯನ್ನು ರಚಿಸಲಾಗಿದ್ದು, ಈ ಕುರಿತಂತೆ ಸಾಕಷ್ಟು ಚರ್ಚೆಗಳು ನಡೆದಿವೆ.

    ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

    ಮೊದಲ ಹಂತದಲ್ಲಿ ದೇಶದಲ್ಲಿ ಏಳು ಮಾರ್ಗಗಳನ್ನು ನಿರ್ಮಿಸಲಾಗುವುದು ಎಂದು ರೈಲ್ವೆ ಇಲಾಖೆ ಹೇಳಿದೆ.
    ಈ ಮಾರ್ಗಗಳ ವಿವರ ಇಲ್ಲಿದೆ ನೋಡಿ:
    1. ದೆಹಲಿಯಿಂದ ವಾರಣಾಸಿಗೆ (ನೋಯ್ಡಾ, ಆಗ್ರಾ ಮತ್ತು ಲಖನೌ ಮೂಲಕ)
    2. ವಾರಣಾಸಿಯಿಂದ ಹೌರಾ (ಪಟ್ನಾ ಮೂಲಕ)
    3. ನವದೆಹಲಿಯಿಂದ ಅಹಮದಾಬಾದ್ (ಜೈಪುರ ಮತ್ತು ಉದಯಪುರದ ಮೂಲಕ)
    4. ನವದೆಹಲಿಯಿಂದ ಅಮೃತಸರಕ್ಕೆ (ಚಂಡೀಗಢ, ಲುಧಿಯಾನ ಮತ್ತು ಜಲಂಧರ್ ಮೂಲಕ)
    5. ಮುಂಬೈನಿಂದ ನಾಗ್ಪುರಕ್ಕೆ (ನಾಸಿಕ್ ಮೂಲಕ)
    6. ಮುಂಬೈನಿಂದ ಹೈದರಾಬಾದ್ (ಪುಣೆ ಮೂಲಕ)
    7. ಮುಂಬೈನಿಂದ ಮೈಸೂರು (ಬೆಂಗಳೂರು ಮೂಲಕ)

    ಸಂಚಲನ ಮೂಡಿಸಿರೋ ‘ಬಿಕಿನಿ ವೈದ್ಯೆ’- ಟೀಕಾಕಾರಿಗೆ ಏನನ್ನುತ್ತಾರೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts