ದೇಶದ ಅತ್ಯುತ್ತಮ ಸಿಎಂ ಪಟ್ಟಿ ಬಿಡುಗಡೆ: ನಾಲ್ಕನೇ ಬಾರಿ ನಂ.1 ಪಟ್ಟ ಯಾರಿಗೆ ಗೊತ್ತಾ?

bestCM
Published on

ನವದೆಹಲಿ: ಇಂಡಿಯಾ ಟುಡೆ ಗ್ರೂಪ್-ಕಾರ್ವಿ ಇನ್‌ಸೈಟ್ಸ್ ಮೂಡ್ ಆಫ್ ದಿ ನೇಷನ್ (MOTN) ಪ್ರತಿವರ್ಷ ನಡೆಸುವ ದೇಶದ ಅತ್ಯುತ್ತಮ ಮುಖ್ಯಮಂತ್ರಿಗಳ ಪೈಕಿ ಈ ಬಾರಿ ನಂ.1 ಸ್ಥಾನ ಗಳಿಸಿದ್ದಾರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ.

ವಿಶೇಷವೆಂದರೆ ಇವರು ಈ ರೀತಿ ನಂ.1 ಪಟ್ಟ ಪಡೆದಿರುವುದು ಇದು ನಾಲ್ಕನೆಯ ಬಾರಿ. ಬರುವ ಮಾರ್ಚ್‌ನಲ್ಲಿ ನಾಲ್ಕು ವರ್ಷದ ಅಧಿಕಾರಾವಧಿ ಮುಗಿಸಲಿರುವ ಯೋಗಿ ಆದಿತ್ಯನಾಥ ಅವರಿಗೆ ನಾಲ್ಕನೆಯ ಬಾರಿಯೂ ಟಾಪ್‌-1 ಸ್ಥಾನ ಸಿಕ್ಕಿದೆ.

2021 ರ ಚುನಾವಣೆಯಲ್ಲಿ ಶೇಕಡಾ 25ರಷ್ಟು ಮತಗಳನ್ನು ಪಡೆಯುವ ಮೂಲಕ ಅತ್ಯುತ್ತಮ ವಾಗಿ ಕಾರ್ಯನಿರ್ವಹಿಸುವ ಸಿಎಂಗಳ ಪಟ್ಟಿಯಲ್ಲಿ ಯೋಗಿ ಆದಿತ್ಯನಾಥ್ ಮೊದಲ ಸ್ಥಾನವನ್ನು ಅಲಂಕರಿಸಿದ್ದಾರೆ. ಇವರು ಭಾರತದ ಅತ್ಯಂತ ಕಿರಿಯ ಮುಖ್ಯಮಂತ್ರಿಗಳಲ್ಲಿ ಒಬ್ಬರು ಎಂದು ಇಂಡಿಯಾ ಟುಡೆ ಗ್ರೂಪ್-ಕಾರ್ವಿ ಇನ್‌ಸೈಟ್ಸ್ ಮೂಡ್ ಆಫ್ ದಿ ನೇಷನ್ ಹೇಳಿದೆ.

ಹಾಥರಸ್‌ ಗ್ಯಾಂಗ್‌ರೇಪ್‌ ಪ್ರಕರಣ ಸೇರಿದಂತೆ ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಕೆಲವು ಘಟನೆಗಳು ಇಡೀ ದೇಶವನ್ನೇ ತಲ್ಲಣಗೊಳಿಸಿದ್ದವು. ಇದರ ಜತೆಗೆ ಬಹು ವಿವಾದಿದ 'ಲವ್ ಜಿಹಾದ್' ಕಾನೂನನ್ನು ಕೂಡ ಜಾರಿಗೆ ತರುವ ಮೂಲಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ಬಹಳ ಚರ್ಚೆಗೆ ಒಳಗಾಗಿದ್ದರು. ಜತೆಗೆ, ಗೋ ಹತ್ಯೆ ವಿರುದ್ಧ ಕಾನೂನು ಜಾರಿ, ಗಲಭೆ ಸಂದರ್ಭದಲ್ಲಿ ಸಾರ್ವಜನಿಕ, ಖಾಸಗಿ ಆಸ್ತಿಗಳಿಗೆ ಹಾನಿ ಯಿರುವ ಬಗ್ಗೆ ಸುಗ್ರೀವಾಜ್ಞೆ ಜಾರಿ ಸೇರಿದಂತೆ ಹಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡರು ಈ ಹಿನ್ನೆಲೆಯಲ್ಲಿ ಈ ಬಾರಿ ಅವರ ಸ್ಥಾನ ಕುಸಿಯುತ್ತದೆ ಎಂದೇ ಅಂದುಕೊಳ್ಳಲಾಗಿತ್ತು.

ಆದರೆ ಬಹುತೇಕ ಮಂದಿ ನಿರೀಕ್ಷೆ ಮೀರಿ ಈ ಬಾರಿಯೂ ತಮ್ಮ ಸ್ಥಾನವನ್ನು ಅವರು ಭದ್ರವಾಗಿಸಿಕೊಂಡಿದ್ದಾರೆ. ಸಮೀಕ್ಷೆ ಪ್ರಕಾರ, ಶೇ.54 ರಷ್ಟು ಪ್ರತಿವಾದಿಗಳು ಆದಿತ್ಯನಾಥ್ ಅವರ ಮತಾಂತರ ವಿರೋಧಿ ಕಾನೂನನ್ನು ಬೆಂಬಲಿಸುತ್ತಿದ್ದರೆ, ಶೇ.58ರಷ್ಟು ಮಂದಿ ಅಂತರ್ಧರ್ಮೀಯ ವಿವಾಹಗಳ ವಿರುದ್ಧ ಕಾನೂನುಗಳ ವಿರುದ್ಧ ಮತ ಚಲಾಯಿಸಿದ್ದಾರೆ.

2017ರ ಮಾರ್ಚ್‌ನಲ್ಲಿ ಆದಿತ್ಯನಾಥ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಉಳಿದಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ( ಶೇ. 24 ಮತ); ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ( ಶೇ. 15); ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ( ಶೇ. 9); ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ( ಶೇ. 7) ಹಾಗೂ

ಒಡಿಶಾ ಸಿಎಂ ನವೀನ್ ಪಟ್ನಾಯಕ್ ಮತ್ತು ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ( ಶೇ. 6) ಮತ ಪಡೆದುಕೊಂಡು ನಂತರದ ಸ್ಥಾನಗಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net