VIDEO: ಈ ವಿಡಿಯೋ ನೋಡಿದ್ರೆ ಖಂಡಿತ ನೀವು ಕೊತ್ತಂಬರಿ ಸೊಪ್ಪಿಗೆ ದೊಡ್ಡ ನಮಸ್ಕಾರ ಹಾಕುವಿರಿ!

corriander
Published on

ಭೋಪಾಲ್: ಪಾನೀಪುರಿಗಳನ್ನು ಕೊಳಚೆ ನೀರು, ಮೂತ್ರದ ನೀರು ಬಳಸಿ ಮಾಡುವ ವಿಡಿಯೋಗಳು ಸಾಕಷ್ಟು ವೈರಲ್‌ ಆಗಿವೆ. ಅದೇ ರೀತಿ ರಸ್ತೆ ಬದಿಯ ವ್ಯಾಪಾರಿಗಳು ಗಲೀಜು ನೀರು ಬಳಸಿ ಅಥವಾ ಎಂಜಲು ಹಚ್ಚಿ ಆಹಾರ ತಯಾರಿಸುವುದು ಕೂಡ ವೈರಲ್‌ ಆಗಿವೆ.

ಇದೀಗ ತರಕಾರಿ ಮಾರಾಟಗಾರನೊಬ್ಬ ಕೊತ್ತಂಬರಿ ಸೊಪ್ಪನ್ನು ಚರಂಡಿ ನೀರಿನಿಂದ ಶುಚಿಗೊಳಿಸಿ ಮಾರಾಟ ಮಾಡುವ ವಿಡಿಯೋ ಒಂದು ವೈರಲ್‌ ಆಗಿದೆ. ಅಂದ ಹಾಗೆ ಇದು, ಭೋಪಾಲ್‍ನ ಸಿಂಧಿ ಮಾರ್ಕೆಟ್‍ನಲ್ಲಿ ನಡೆದಿದ್ದು, ಇದನ್ನು ಯಾರೋ ವಿಡಿಯೋ ಮಾಡಿ ಹಾಕಿದ್ದಾರೆ.

ಈ ವಿಡಿಯೋದಲ್ಲಿ ತರಕಾರಿ ಮಾರಾಟಗಾರನೊಬ್ಬ ಚರಂಡಿ ನೀರಿನಲ್ಲಿ ಕೊತ್ತಂಬರಿ ಸೊಪ್ಪನ್ನು ತೊಳೆಯುವುದನ್ನು ನೋಡಬಹುದು. ಅದನ್ನು ನೋಡಿದಾಗ ಆತನಿಗೆ ಬೈದು ಹೀಗೆ ಗಲೀಜು ನೀರಿನಲ್ಲಿ ಸೊಪ್ಪು ತೊಳೆಯಬೇಡ ಎಂದು ಪದೇ ಪದೇ ಹೇಳುತ್ತಾನೆ. ಆದರೆ ಮಾರಾಟಗಾರ ಅವನಿಗೇ ಬುದ್ಧಿ ಹೇಳಿ ತನ್ನ ಕೆಲಸ ಮುಂದುವರಿಸುತ್ತಾನೆ.

ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಮಾರಾಟಗಾರನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು, ಸ್ಥಳೀಯ ಆರೋಗ್ಯ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಮಾರಾಟಗಾರನ ಬಗ್ಗೆ ತಿಳಿದು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ. ಅಂದಹಾಗೆ ತರಕಾರಿಗಳನ್ನು ಕೊಳಚೆ ನೀರಿನಲ್ಲಿ ತೊಳೆಯುವ ಹಲವು ವಿಡಿಯೋಗಳು ಕೂಡ ಇದಾಗಲೇ ಸಾಕಷ್ಟು ವೈರಲ್‌ ಆಗಿವೆ ಅನ್ನಿ. ಆದರೂ ಜನರು ಪಾನೀಪುರಿಯನ್ನಾಗಲಿ, ರೋಡ್‌ ಸೈಡ್‌ ಆಹಾರವನ್ನಾಗಲೀ, ತರಕಾರಿಯನ್ನಾಗಲಿ ಖರೀದಿಸುವುದನ್ನು ಬಿಟ್ಟಿಲ್ಲ, ಬಿಡಲ್ಲ ಎನ್ನುವುದೂ ಸತ್ಯವೇ. 

ವಿಡಿಯೋ ನೋಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net