

ಚೆನ್ನೈ: ಆರು ತಿಂಗಳ ತನ್ನ ಮಗು ಸತ್ತು ಹೋಯಿತು ಎಂದು ಎಲ್ಲರೆದುರು ಸುಳ್ಳು ಹೇಳಿದ್ದ ತಂದೆಯೊಬ್ಬ ಸಾಲ ಸಾಲ ತೀರಿಸಲು ಹಣವಿಲ್ಲದೆ ಅದನ್ನು ಮಾರಾಟ ಮಾಡಿರುವ ಘಟನೆ ಸೇಲಂನ ಲಿನೆಮೆಡ್ನಲ್ಲಿ ನಡೆದಿದೆ.
ಸೌಕತ್ ಆಲಿ ಎಂಬಾತ 1 ಲಕ್ಷ ರೂಪಾಯಿಗೆ ಮಗುವನ್ನು ಮಾರಾಟ ಮಾಡಲಾಗಿದ್ದು, ಪೊಲೀಸರು ಮಗುವನ್ನು ವಾಪಸ್ ಕರೆದು ತಾಯಿಯ ಬಳಿ ಬಿಟ್ಟಿದ್ದಾರೆ. ಸೌಕತ್‍ನ ಗೆಳೆಯ ಸೆಡ್ಡು ಹಾಗೂ ಮಗುವನ್ನು ಖರೀದಿಸಿದ ಸುಂದರಮ್ ಮಗು ಮಾರಾಟದಲ್ಲಿ ಶಾಮೀಲಾಗಿದ್ದು ಅವರನ್ನೂ ಬಂಧಿಸಲಾಗಿದೆ.
6 ತಿಂಗಳ ಹಿಂದೆ ಸೌಕತ್ ಹೆಂಡತಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ ಲಾಕ್‍ಡೌನ್ ಸಮಯದಲ್ಲಿ ಆಲಿಗೆ ಯಾವುದೇ ಕೆಲಸ ಇರಲಿಲ್ಲ. ಹಾಗಾಗಿ ವಿಪರೀತ ಸಾಲ ಮಾಡಿಕೊಂಡಿದ್ದನು.
ಕುಟುಂಬದವರು ಮಗುವನ್ನು ನೋಡಲು ಮನೆಗೆ ಬಂದಿದ್ದರು. ಆದರೆ ಮಗು ಮನೆಯಲ್ಲಿ ಇಲ್ಲದಿರುವುದನ್ನು ಕಂಡು ಸೌಕತ್ ಆಲಿಯ ಬಳಿ ಸಂಬಂಧಿಕರು ಪ್ರಶ್ನೆ ಮಾಡಿದ್ದಾರೆ. ಈತ ಮಗು ಸತ್ತು ಹೋಗಿದೆ ಎಂದಿದ್ದಾನೆ.
ಹೆಂಡತಿಯನ್ನು ವಿಚಾರಿಸಿದಾಗ ಆಕೆಯೂ ಸರಿಯಾಗಿ ಉತ್ತರ ಕೊಡಲಿಲ್ಲ. ಇದರಿಂದ ಅನುಮಾನಗೊಂಡ ಸಂಬಂಧಿಗಳು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಸೌಕತ್ ಆಲಿಯನ್ನು ವಿಚಾರಣೆ ಮಾಡಿದಾಗ ಸತ್ಯ ಬಾಯಿ ಬಿಟ್ಟಿದ್ದಾನೆ.
ಮಕ್ಕಳಿಲ್ಲದ ಸುಂದರಮ್ ಎಂಬವರಿಗೆ 1 ಲಕ್ಷ ರೂಪಾಯಿಗೆ ಮಗುವನ್ನು ಮಾರಿದ್ದಾನೆ ಎಂದು ತನಿಖೆಯಿಂದ ತಿಳಿದು ಬಂದಿದೆ. ಮಗುವನ್ನು ಪೊಲೀಸರು ಸುಂದರಂ ಮನೆಯಿಂದ ವಶಪಡಿಸಿಕೊಂಡು ಆಲಿಯ ಪತ್ನಿಗೆ ಹಸ್ತಾಂತರಿಸಿದ್ದಾರೆ. ಮಗುವಿನ ಮಾರಾಟದಲ್ಲಿ ಶಾಮಿಲಾಗಿರುವ ಮೂವರು ಆರೋಪಿಗಳನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.