ಬಾಣಲೆಗೆ ಬಿದ್ದು ಚಿಕನ್‌ಸೂಪ್‌ ಜತೆ ಬೆಂದುಹೋದ ಪ್ರಸಿದ್ಧ ಬಾಣಸಿಗ- ಔತಣಕೂಟದಲ್ಲಿ ಭಾರಿ ದುರಂತ

chickensoup
Published on

ಇರಾಕ್: ಔತಣಕೂಟವೊಂದರಲ್ಲಿ ಚಿಕನ್‌ ಸೂಪ್‌ ತಯಾರು ಮಾಡುತ್ತಿರುವ ಸಂದರ್ಭದಲ್ಲಿ ಬಾಣಲೆಗೆ ಬಿದ್ದು ಪ್ರಸಿದ್ಧ ಬಾಣಸಿಗನೊಬ್ಬ ಬೆಂದುಹೋಗಿರುವ ಭಯಾನಕ ಘಟನೆ ಇರಾಕ್‌ನಲ್ಲಿ ನಡೆದಿದೆ.

ಜಾಕೋ ಪ್ರದೇಶದಲ್ಲಿ ಮದುವೆ ಸಮಾರಂಭದಲ್ಲಿ ಈ ದುರಂತ ನಡೆದಿದೆ. ಅದ್ಧೂರಿ ಮದುವೆ ಸಮಾರಂಭ ಇದಾಗಿತ್ತು. ಈ ಸಮಾರಂಭದಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ಈ ಸಮಯದಲ್ಲಿ ಬಾಣಸಿಗರ ಬೃಹತ್‌ ಗುಂಪು ವಿವಿಧ ಖಾದ್ಯಗಳನ್ನು ತಯಾರಿಸುತ್ತಿತ್ತು. ಆ ಸಮಯದಲ್ಲಿ ಬಾಣಸಿಗನೊಬ್ಬ ಚಿಕನ್‌ ಸೂಪ್‌ ತಯಾರಿಸುತ್ತಿದ್ದ. ಊಟ ಬಡಿಸಲು ಎಲ್ಲಾ ಸಿದ್ಧತೆ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಬಾಣಸಿಗ ಇದ್ದಕ್ಕಿದ್ದಂತೆಯೇ ಕಾಲುಜಾರಿ ಬಾಣಲೆಯಲ್ಲಿ ಬಿದ್ದುಬಿಟ್ಟಿದ್ದಾನೆ. ಬಾಣಲೆ ಎಷ್ಟು ಬಿಸಿಯಾಗಿತ್ತು ಎಂದರೆ ಅದರಲ್ಲಿಯೇ ಬೆಂದುಹೋಗಿದ್ದಾನೆ, ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬದುಕಿ ಉಳಿಯಲಿಲ್ಲ.

  1. ಈ ದುರ್ದೈವಿ ಹೆಸರು ಇಸ್ಸಾ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ. 25 ವರ್ಷಗಳಿಂದ ಇದೇ ವೃತ್ತಿಯಲ್ಲಿ ಇರುವ ಇಸ್ಮಾಯಿಲ್‌ ಈ ಪ್ರದೇಶದಲ್ಲಿ ಭಾರಿ ಖ್ಯಾತಿ ಗಳಿಸಿದವ. ಇದೀಗ ದುರಂತ ಅಂತ್ಯ ಕಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net