More

    ಗ್ರಾಹಕರಿಗೆ ಎಲ್‌ಪಿಜಿ ಸಿಲಿಂಡರ್‌ ಶಾಕ್‌: 25 ರೂ. ಹೆಚ್ಚಳ- ಎಲ್ಲೆಲ್ಲಿ, ಎಷ್ಟೆಷ್ಟು ರೇಟ್‌ ನೋಡಿ…

    ನವದೆಹಲಿ: ಕರೊನಾ, ಲಾಕ್‌ಡೌನ್‌ನಿಂದ ತತ್ತರಿಸಿರುವ ಜನರಿಗೆ ಇದೀಗ ಎಲ್‌ಪಿಜಿ ಸಿಲಿಂಡರ್‌ ಶಾಕ್‌ ನೀಡಿದೆ. ಜುಲೈ 1ರಿಂದಲೇ ಅನ್ವಯ ಆಗುವಂತೆ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ 25.50 ರೂಪಾಯಿ ಹೆಚ್ಚಳ ಮಾಡಲಾಗಿದೆ.
    ಇಂಧನ ಬೆಲೆ ಏರಿಕೆ ಬೆನ್ನಲ್ಲೇ ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಳ ಮಾಡಿರುವುದು ಇದೀಗ ಗಾಯದ ಮೇಲೆ ಬರೆ ಎಳೆದಂತಾಗಿದೆ.

    ಫೆಬ್ರವರಿ ಹಾಗೂ ಮಾರ್ಚ್‌ ತಿಂಗಳಿನಲ್ಲಿ ಅಡುಗೆ ಅನಿಲ ಬೆಲೆಯನ್ನು ಏರಿಕೆ ಮಾಡಲಾಗಿತ್ತು. ಏಪ್ರಿಲ್‌ನಲ್ಲಿ 10ರೂ ಬೆಲೆ ಇಳಿಕೆ ಮಾಡಲಾಗಿತ್ತು. ಮೇ ತಿಂಗಳಿನಲ್ಲಿ ಯಾವುದೇ ಪರಿಷ್ಕರಣೆ ಮಾಡಿರಲಿಲ್ಲ. ಇದೀಗ ಜುಲೈ ತಿಂಗಳಿನಲ್ಲಿ 25.50 ರೂ ಬೆಲೆ ಏರಿಕೆ ಮಾಡಲಾಗಿದೆ. ಕಳೆದ ಆರು ತಿಂಗಳಲ್ಲಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ಗೆ ರೂ. 140 ರಷ್ಟು ಏರಿಕೆಯಾಗಿದೆ.

    ಸದ್ಯ ಮಹಾನಗರಗಳಲ್ಲಿ ದರ ಎಷ್ಟೆಷ್ಟಿವೆ ನೋಡಿ:

    * ಬೆಂಗಳೂರಿನಲ್ಲಿ ಸಿಲಿಂಡರ್ ಬೆಲೆ 812 ರಿಂದ 836.50 ರೂಗೆ ಹೆಚ್ಚಳ

    * ನವದೆಹಲಿಯಲ್ಲಿ 809 ರೂ.ನಿಂದ 834.50 ರೂಪಾಯಿಗೆ ಏರಿಕೆ

    * ಕೋಲ್ಕತಾದಲ್ಲಿ 835.50 ರೂ.ನಿಂದ 861 ರೂಪಾಯಿಗೆ ಏರಿಕೆ

    * ಮುಂಬೈನಲ್ಲಿ 809 ರೂ.ನಿಂದ 834.50 ರೂಪಾಯಿಗೆ ಹೆಚ್ಚಳ

    * ಚೆನ್ನೈನಲ್ಲಿ 850.5ಕ್ಕೆ ಹೆಚ್ಚಳ

    ವರನಿಗೆ ಮದುವೆಯಾಗೋ ಅರ್ಜೆಂಟು: ಹಾರ ಬದಲಾಯಿಸುವಾಗ ಎಡವಟ್ಟು- ಮುಂದೇನಾಯ್ತು ನೋಡಿ…

    ಡಿಎಲ್‌, ಆರ್‌ಸಿ ಡೇಟ್‌ ಬಾರ್‌ ಆಗಿದೆ ಎನ್ನೋ ಚಿಂತೆ ಬಿಡಿ: ಇನ್ನು ಮೂರು ತಿಂಗಳು ಆರಾಮಾಗಿರಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts