ಕೋವಿಡ್‌ಗೆ ಬಲಿಯಾದ ಚೀಟಿದಾರ- ಉಲ್ಟಾ ಹೊಡೆದ ಮಕ್ಕಳು: ನೂರಾರು ಜನರ ಸ್ಥಿತಿ ಅಯೋಮಯ!

cheeti
Published on

ಚಾಮರಾಜನಗರ: ಚೀಟಿ ಹಾಕಿಸಿಕೊಂಡು ನೂರಾರು ಜನರಿಗೆ ಟೋಪಿ ಹಾಕಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ದುಡಿದ ಹಣ ಉಳಿಸಲು ಚೀಟಿ ಹಾಕಿದ ಜನರ ಕೈಗೆ ಚೀಟಿ ವ್ಯವಹಾರ ನಡೆಸುತ್ತಿದ್ದವನ ಕುಟುಂಬ ಚೊಂಬು ನೀಡಿದೆ. ಆಗಿದ್ದೇನೆಂದರೆ ಲಕ್ಷಾಂತರ ರೂ.ಗಳ ಚೀಟಿ ನಡೆಸುತ್ತಿದ್ದ ವಿ.ಟಿ.ಪಿ.ವಜೀರ್ ಕೋವಿಡ್‌ಗೆ ಬಲಿಯಾಗಿದ್ದಾರೆ. ಇವರ ನಿಧನದಿಂದಾಗಿ ಚೀಟಿ ಹಾಕಿದ ನೂರಾರು ಜನರ ಸ್ಥಿತಿ ಅತಂತ್ರವಾಗಿದೆ.

ಚೀಟಿ ನಡೆಸುತ್ತಿದ್ದ ವಜೀರ್ ತಮ್ಮ ಇಬ್ಬರು ಮಕ್ಕಳ ಮೂಲಕ ಹಣ ವಸೂಲಿ ಮಾಡಿಸುತ್ತಿದ್ದರು. ಅವರು ನಿಧನವಾದಾಗ ಹಣ ಕಟ್ಟಿದ್ದ ಜನರು ಮಕ್ಕಳನ್ನು ಕೇಳಿದಾಗ ಕಾರ್ಯ ಮುಗಿಸಿ ಹಣ ನೀಡುವುದಾಗಿ ಮಕ್ಕಳು ಹೇಳಿದ್ದರು.

ಆದರೆ ತಿಂಗಳು ಕಳೆದಂತೆ ಹಣ ಕಟ್ಟಿದವರಿಗೆ ಮಕ್ಕಳು ಉಲ್ಟಾ ಹೊಡೆದಿದ್ದಾರೆ. ಉಲ್ಟಾ ಹೇಳಿಕೆಯಿಂದ ಗಾಬರಿ ಬಿದ್ದ ಹಣ ಕಟ್ಟಿರುವ ನೂರಾರು ಜನರಿಂದ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಇದುವರೆಗೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎನ್ನುವುದು ಸ್ಥಳೀಯರ ಆರೋಪ.

ಇದರಿಂದ ಜನರು ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ನಂತರ ವಜೀರ್ ಮಕ್ಕಳಾದ ಜಮೀರ್ ಪಾಷ ಹಾಗೂ ತನ್ವೀರ್ ಪಾಷರನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net