ಕೇಂದ್ರ ಸರ್ಕಾರಿ ಉದ್ಯೋಗಕ್ಕೆ ಇಷ್ಟಪಟ್ಟಿರುವಿರಾ? ವಿವಿಧ ಇಲಾಖೆಗಳಿಂದ 33 ಹುದ್ದೆಗಳಿಗೆ ಆಹ್ವಾನ

job-UPSC
Published on

ಕೇಂದ್ರ ಲೋಕಸೇವಾ ಆಯೋಗದಿಂದ ಕೇಂದ್ರ ಸರ್ಕಾರದ ವಿವಿಧ ಇಲಾಖೆಯಲ್ಲಿರುವ ಹಲವು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಒಟ್ಟು ಹುದ್ದೆಗಳು: 33

ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯ (ನೌಕಾಪಡೆ) ನಾಗರಿಕ ಸಿಬ್ಬಂದಿ ನಿರ್ದೇಶನಾಲಯ, ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಇಲಾಖೆಯ ಡಿೆನ್ಸ್​ ರಿಸರ್ಚ್​ ಆ್ಯಂಡ್​ ಡೆವಲಪ್​ಮೆಂಟ್​ ಆರ್ಗನೈಸೇಷನ್​ (ಡಿಆರ್​ಡಿಒ), ಮೈನ್ಸ್​ ಸಚಿವಾಲಯದ ಇಂಡಿಯನ್​ ಬ್ಯೂರೋ ಆ್​ ಮೈನ್ಸ್​ ವಿಭಾಗ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆಯುಷ್​ ಇಲಾಖೆಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಹುದ್ದೆಗಳಲ್ಲಿ ಮೀಸಲಾತಿ ನಿಗದಿಯಾಗಿದೆ.

ಹುದ್ದೆ ವಿವರ

* ಸ್ಟೋರ್ಸ್​ ಆಫೀಸರ್​ - 11
ಡಿಆರ್​ಡಿಒನಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಯಾವುದೇ ಪದವಿ ಪಡೆದಿದ್ದು, ಟೆಕ್ನಿಕಲ್​ ಸ್ಟೋರ್ಸ್​/ ಅಕೌಂಟ್ಸ್​ ನಿರ್ವಹಣೆಯಲ್ಲಿ ಕನಿಷ್ಠ 3 ವರ್ಷದ ವೃತ್ತಿ ಅನುಭವ ಹೊಂದಿರಬೇಕು. ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಿದ್ದು, 7ನೇ ವೇತನ ಆಯೋಗದ ಅನ್ವಯ 7ನೇ ಹಂತದ ವೇತನ ಇದೆ. ಖರೀದಿ ಇಂಡೆಂಟಿಂಗ್​, ತಾಂತ್ರಿಕ ಮಳಿಗೆಳ ನಿರ್ವಹಣೆ, ಖಾತೆಗಳ ನಿರ್ವಹಣೆ, ನಿರ್ದೇಶಕರು ಮತ್ತು ಸಂಬಂಧಪಟ್ಟ ಲ್ಯಾಬ್​ಗೆ ಇತ್ತೀಚಿನ ಸೂಚನೆಗಳನ್ನು ತಿಳಿಸುವುದು, ಸಲಹೆ ನೀಡುವುದು ಹಾಗೂ ನಿಯೋಜಿಸುವ ಇತರ ಕೆಲಸಗಳನ್ನು ಮಾಡಬೇಕಿರುತ್ತದೆ.

* ಅಸಿಸ್ಟೆಂಟ್​ ಮಿನೆರಲ್​ ಎಕನಾಮಿಸ್ಟ್​ - 14
ಮೈನ್ಸ್​ ಸಚಿವಾಲಯದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಹರಾಗಿದ್ದಾರೆ. ಅಪ್ಲೆಡ್​ ಜಿಯಾಲಜಿ/ ಜಿಯಾಲಜಿ/ ಎಕನಾಮಿಕ್ಸ್​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. 7ನೇ ವೇತನ ಆಯೋಗದ ಅನ್ವಯ 10ನೇ ಹಂತದ ವೇತನ ನೀಡಲಾಗುವುದು.

* ಅಸಿಸ್ಟೆಂಟ್​ ಪ್ರೊಫೆಸರ್​ (ಸಹಾಯಕ ಪ್ರಾಧ್ಯಾಪಕ) - 8
(ಇತಿಹಾಸ - 1, ಆಯುರ್ವೇದ - 7)
ರಕ್ಷಣಾ ಸಚಿವಾಲಯದ ನಾಗರಿಕ ಸಿಬ್ಬಂದಿ ನಿರ್ದೇಶನಾಲಯದಲ್ಲಿ ಇತಿಹಾಸ ವಿಷಯಕ್ಕೆ ಸಹಾಯಕ ಪ್ರಾಧ್ಯಾಪಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಗರಿಷ್ಠ 35 ವರ್ಷ ವಯೋಮಿತಿ ಇದೆ. ಆಯುಷ್​ ನಿರ್ದೇಶನಾಲಯದಲ್ಲಿ ಅಗಾದ್​ ತಂತ್ರ ಮತ್ತು ವಿಧಿ ವೈದ್ಯ ವಿಭಾಗ, ದ್ರವ್ಯ ಗುಣ, ಪ್ರಸೂತಿ ತಂತ್ರ ಹಾಗೂ ಸ್ತ್ರೀ ರೋಗ, ರಸಶಾಸ್ತ್ರ ಹಾಗೂ ಭೈಷಜ್ಯ ಕಲ್ಪನಾ, ಶಲಾಕ್ಯ ತಂತ್ರ ವಿಭಾಗಗಳಲ್ಲಿ ಸಹಾಯಕ ಪ್ರಾಧ್ಯಾಪಕರು ಬೇಕಾಗಿದ್ದಾರೆ. ಆಯುರ್ವೇದ ಔಷಧದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಗರಿಷ್ಠ 48 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. 7ನೇ ವೇತನ ಆಯೋಗದ ಅನ್ವಯ 10ನೇ ಹಂತದ ವೇತನ ಇದೆ.

ಸೂಚನೆ: ಸಂದರ್ಶನ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಮೀಸಲಾತಿ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳಿಗೆ 25 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಆನ್​ಲೈನ್​ ಅರ್ಜಿ ಸಲ್ಲಿಸಿದ ಬಳಿಕ ಅದರ ಪ್ರತಿಯನ್ನು ಡೌನ್​ಲೋಡ್​ ಮಾಡಿಕೊಳ್ಳಲು ಮಾ.4ರ ವರೆಗೆ ಅವಕಾಶ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 3.3.2022

ಅಧಿಸೂಚನೆಗೆ: https://bit.ly/3JomDbw

ಮಾಹಿತಿಗೆ: http://www.upsc.gov.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net