ಅಕ್ಕ-ಪಕ್ಕದ ಮನೆಯವರ ಗಲಾಟೆಗೆ ಕಾರಣವಾಯ್ತು ಗಿಳಿ ಹಾಕ್ತಿರೋ ಶಿಳ್ಳೆ! ಮಾಲೀಕನ ವಿರುದ್ಧ ಕೇಸ್​

parrot
Published on

ಪುಣೆ: ತಮ್ಮ ಮನೆಯ ಗಿಳಿಯೊಂದು ಕಾಣೆಯಾಗಿದ್ದಕ್ಕೆ ಅದನ್ನು ಹುಡುಕಿ ಕೊಟ್ಟವರಿಗೆ ಭಾರಿ ಮೊತ್ತದ ನಗದು ಬಹುಮಾನ ನೀಡಿದ್ದ ಘಟನೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿತ್ತು. ಆದರೆ ಇಲ್ಲೊಬ್ಬ ಗಿಳಿ ಮಾಲೀಕನಿಗೆ ತಾನು ಸಾಕಿರುವ ಗಿಳಿಯೇ ತಲೆನೋವಾಗಿ ಪರಿಣಮಿಸಿದೆ. ಏಕೆಂದರೆ ಅದು ಬರೀ ಶಿಳ್ಳೆ ಹೊಡೆಯುತ್ತಿದೆ.

ಹಾಗೆಂದು ತನ್ನ ಗಿಳಿ ಶಿಳ್ಳೆ ಹೊಡೆದರೆ ಮಾಲೀಕನಿಗೆ ಏನೂ ತೊಂದರೆಯಿಲ್ಲ, ತೊದರೆಯಾಗುತ್ತಿರುವುದು ಅಕ್ಕಪಕ್ಕದ ನಿವಾಸಿಗಳಿಗೆ ಅಂತೆ. ಪುಣೆಯ ಶಿವಾಜಿನಗರದ ತುಳಸಿ ಮಾರುಕಟ್ಟೆ ಬಳಿಯ ಮಹಾತ್ಮಗಾಂಧಿ ಕಾಲೋನಿಯಲ್ಲಿ ವಾಸಿಸುತ್ತಿರುವ ಅಕ್ಬರ್ ಅಮ್ಜದ್ ಖಾನ್ ಎನ್ನುವವರು ಗಿಳಿ ಸಾಕಿದ್ದು, ಇದೀಗ ಅವರ ವಿರುದ್ಧ ದೂರು ದಾಖಲಾಗಿದೆ.

‘ಗಿಳಿ ಶಿಳ್ಳೆ ಹೊಡೆದು ತೊಂದರೆ ನೀಡುತ್ತಿದೆ ಎಂದು ನೆರೆಮನೆಯ 72 ವಯಸ್ಸಿನ ಸುರೇಶ ಅಂಕುಶ ಶಿಂಧೆ ಎಂಬುವವರು ದೂರು ದಾಖಲಿಸಿದ್ದಾರೆ. ನಿಮ್ಮ ಗಿಣಿ ನಮಗೆ ತೊಂದರೆ ಕೊಡುತ್ತಿದೆ, ಅದನ್ನು ಬೇರೆಡೆ ಇಡಿ ಎಂದು ಮಾಲೀಕನಿಗೆ ಹೇಳಿದರೂ ಅದನ್ನು ಆತ ಕಿವಿ ಮೇಲೆ ಹಾಕಿಕೊಳ್ಳುತ್ತಿಲ್ಲ. ಅದು ಸಿಳ್ಳೆ ಹೊಡೆಯುತ್ತಿರುವುದಕ್ಕೆ ನನಗೆ ತುಂಬಾ ಹಿಂಸೆ ಆಗುತ್ತಿದೆ ಎಂದಿದ್ದಾರೆ ಸುರೇಶ್​. ಈ ಬಗ್ಗೆ ಕೇಳಿದ್ದರೆ ಆತನನ್ನು ಕೇಳಿದರೆ, ನನ್ನನ್ನೇ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂದಿದ್ದಾರೆ.

ಸದ್ಯ ಪೊಲೀಸರು ಅಕ್ಬರ್ ಅಮ್ಜದ್ ಖಾನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net