More

    ಹಂಪಿಯ ಪಾರಂಪರಿಕ ತಾಣಕ್ಕೂ ಎದುರಾಯ್ತು ಜಲಕಂಟಕ! ಮುಳುಗಿಹೋದವು ಐತಿಹಾಸಿಕ ಸ್ಮಾರಕಗಳು

    ವಿಜಯನಗರ: ವಿಜಯನಗರ ಜಿಲ್ಲೆಯ ಹೊಸಪೇಟೆ ಬಳಿ ಇರೋ ತುಂಗಭದ್ರಾ ಜಲಾಶಯದಿಂದ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ನದಿಗೆ ಬಿಡುಗಡೆ ಮಾಡಲಾಗಿದ್ದು, ಇದಾಗಲೇ ಹಂಪಿನ ಹಲವಾರು ಸ್ಮಾರಕಗಳು ಮುಳುಗಿ ಹೋಗಿವೆ.

    ಹಂಪಿಯಲ್ಲಿರುವ ಧಾರ್ಮಿಕ ವಿಧಿವಿಧಾನ ಮಂಟಪ, ಸ್ನಾನಘಟ್ಟ ಈಗಾಗಲೇ ಮುಳುಗಡೆಯಾಗಿದೆ. ಇನ್ನು ವಿಜಯ ವಿಠಲ ದೇವಸ್ಥಾನದ ಬಳಿಯಲ್ಲಿರುವ ಪುರಂದರದಾಸರ ಮಂಟಪ ಮುಳುಗಡೆಯಾಗುವತ್ತ ಸಾಗಿದೆ. ಕೋದಂಡರಾಮ ದೇವಸ್ಥಾನದ ಬಳಿ ನೀರು ಹರಿಯುತ್ತಿದ್ದು, ಹೊರಹರಿವಿನ ಪ್ರಮಾಣ ಹೆಚ್ಚಾದಲ್ಲಿ ಅದೂ ಸಹ ಮುಳುಗಡೆಯಾಗಲಿದೆ.

    ಈಗಾಗಲೇ ಕೋದಂಡರಾಮ ದೇವಸ್ಥಾನಕ್ಕೆ ಹೋಗುವ ದಾರಿಯ ಸಮೀಪವೇ ನದಿ ನೀರು ರಭಸವಾಗಿ ಹರಿಯುತ್ತಿದ್ದು, ಇನ್ನೂ ಹೆಚ್ಚಿನ‌ ಪ್ರಮಾಣದ ನೀರು ಬಿಟ್ಟರೆ ಆ ದಾರಿಯೂ ಬಂದ್ ಆಗಲಿದೆ.

    ಈ ವರ್ಷ ಮಳೆಗಾಲ ಆರಂಭವಾದಾಗಿನಿಂದ ಈ ರೀತಿ ಹಂಪಿಯ ಸ್ಮಾರಕಗಳು ಮುಳುಗಡೆಯಾಗುತ್ತಿರುವುದು ಎರಡನೇ ಬಾರಿಯಾಗಿದೆ. (ದಿಗ್ವಿಜಯ ನ್ಯೂಸ್​)

    ಕೆಆರ್​ಎಸ್​ನಿಂದ ದಾಖಲೆ ಪ್ರಮಾಣದ ನೀರು ಬಿಡುಗಡೆ: 40 ಗ್ರಾಮಗಳಿಗೆ ಪ್ರವಾಹದ ಭೀತಿ- ಐತಿಹಾಸಿಕ ತಾಣಗಳಿಗೂ ಕಂಟಕ

    ಕಣ್ಣಲ್ಲಿ ಕಣ್ಣಿಟ್ಟು ಕಾಯ್ತಿದ್ರೂ ಸಿಕ್ತಿಲ್ಲ ಚಿರತೆ: ಬೆಳಗಾವಿಯ 22 ಶಾಲೆಗಳಿಗೆ ರಜೆ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts