

ಲಖನೌ: ಅತ್ಯಂತ ವಿಚಿತ್ರ ಘಟನೆಯೊಂದರಲ್ಲಿ ಇಬ್ಬರು ಬಾಲಕರು ಸೇರಿ ಇನ್ನೋರ್ವ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದೆ ಘಟನೆ ಉತ್ತರಪ್ರದೇಶದ ಅಲಿಗಢದಲ್ಲಿ ನಡೆದಿದೆ.
13 ವರ್ಷದ ಬಾಲಕ ಇನ್ನಿಬ್ಬರು ಬಾಲಕರಿಂದ ದೌರ್ಜನ್ಯಕ್ಕೆ ಒಳಗಾದವನು. ಲೈಂಗಿಕ ದೌರ್ಜನ್ಯ ಎಸಗಿದ ಬಳಿಕ ಆ ಬಾಲಕನಿಗೆ 20 ರೂಪಾಯಿ ನೀಡಿರುವ ಈ ಇಬ್ಬರು ಬಾಲಕರು, ವಿಷಯವನ್ನು ಯಾರಿಗೂ ಹೇಳಬೇಡ ಎಂದು ಹೇಳಿದ್ದಾರೆ!
ಬಾಲಕ ಗದ್ದೆಗೆ ಹೋಗುವ ಮಾರ್ಗದಲ್ಲಿ ಸಿಕ್ಕ ಈ ಇಬ್ಬರು ಆರೋಪಿ ಬಾಲಕರು ಆತನನ್ನು ಎಳೆದುಕೊಂಡು ಕಾಡಿನೊಳಕ್ಕೆ ಹೋಗಿ ಈ ಕೃತ್ಯ ಎಸಗಿರುವುದಾಗಿ ಪೊಲೀಸರು ಹೇಳಿದ್ದಾರೆ. 13 ವರ್ಷದ ಬಾಲಕ ತನ್ನ ತಂದೆಯ ಜತೆ ತೋಟಕ್ಕೆ ಹೋಗಿದ್ದ. ಆ ಸಮಯದಲ್ಲಿ ತೋಟದ ಉಪಕರಣ ಬೇಕಾಗಿತ್ತು. ಮನೆಗೆ ಮಗನನ್ನು ಕಳುಹಿಸಿದ್ದ ತಂದೆ ಅದನ್ನು ತರುವಂತೆ ಹೇಳಿದ್ದಾರೆ.
ಅದನ್ನು ತೆಗೆದುಕೊಂಡು ತೋಟಕ್ಕೆ ಬರುತ್ತಿದ್ದ ವೇಳೆ ಈ ಇಬ್ಬರು ಬಾಲಕರು ಆತನಿಗೆ ಸಿಕ್ಕಿದ್ದಾರೆ. ನಂತರ ಮಾತನಾಡುತ್ತಾ ಆತನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ನಂತರ 20 ರೂಪಾಯಿ ನೀಡಿ ಈ ವಿಷಯವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಗಿದ್ದಾರೆ ಎನ್ನಲಾಗಿದೆ.
ನಂತರ ತೀವ್ರವಾಗಿ ಗಾಯಗೊಂಡು ಬಂದ ಬಾಲಕ ತನ್ನ ತಂದೆಗೆ ವಿಷಯ ತಿಳಿಸಿದ್ದಾನೆ. ಕೂಡಲೇ ಅವರು ಪೊಲೀಸ್ ಠಾಣೆಗೆ ದೂರು ದಾಖಲು ಮಾಡಿದ್ದಾರೆ. ದೂರು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.