

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದು ಭಾರತದ ಕೀರ್ತಿ ಪತಾಕೆ ಹಾಕಿಸಿರುವ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾಗೆ ಮಹೀಂದ್ರಾ ಭಾರಿ ಉಡುಗೊರೆ ನೀಡಿದೆ. XUV 700 ಕಾರನ್ನು ಉಡುಗೊರೆಯಾಗಿ ನೀಡಿದೆ.
87.58 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ದಾಖಲೆ ಮಾಡಿದ್ದ ನೀರಜ್‌ಗೆ ಚಿನ್ನದ ಪದಕ ವಿಜೇತನ ಸಾಧನೆ ಗುರುತಿಸುವ ಉದ್ದೇಶದಿಂದ ಕಾರನ್ನು ನೀಡುವುದಾಗಿ ಈ ಹಿಂದೆಯೇ ಘೋಷಿಸಲಾಗಿತ್ತು. ಅವರಿಗಾಗಿಯೇ ಕಾರಿಗೆ ವಿಶೇಷ ವಿನ್ಯಾಸವನ್ನೂ ಮಾಡಲಾಗಿದೆ.
ಕಾರು ಪಡೆದ ನೀರಜ್ ತುಂಬಾ ಸಂತೋಷಗೊಂಡಿದ್ದು, ಮಹೀಂದ್ರಾ ಕಂಪೆನಿಗೆ ಧನ್ಯವಾದ ತಿಳಿಸಿದ್ದಾರೆ. ನನಗಾಗಿಯೇ ಇಷ್ಟೆಲ್ಲಾ ವಿನ್ಯಾಸ ಮಾಡಿರುವುದು ಅತೀವ ಸಂತೋಷವಾಗಿದೆ ಎಂದಿದ್ದಾರೆ.
ಅಂದಹಾಗೆ ಈ ಕಾರು ಕಪ್ಪು ಬಣ್ಣದ್ದಾಗಿದ್ದು, ಸ್ಯಾಟಿನ್ ಚಿನ್ನದ ಲೇಪವನ್ನೂ ಹೊಂದಿದೆ. ಹೊಸ ಮಹೀಂದ್ರಾ ಲೋಗೊ ಬಳಸಲಾಗಿದೆ.