ನದಿಗೆ ಬಿದ್ದ ಬಸ್‌: ದಸರಾ ರಜ ಸವಿಯಲು ನೇಪಾಳಕ್ಕೆ ಹೋದ 32 ಜನರ ದಾರುಣ ಸಾವು

bus
Published on

ಕಠ್ಮಂಡು: ದಸರಾ ಹಬ್ಬದ ನಿಮಿತ್ತ ರಜೆ ಇರುವ ಕಾರಣ, ಪ್ರವಾಸಕ್ಕೆಂದು ನೇಪಾಳಕ್ಕೆ ಹೋದ ವಿವಿಧ ರಾಜ್ಯಗಳ ಪ್ರವಾಸಿಗರು ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಇವರು ಇದ್ದ ಬಸ್‌ ಚಾಲಕನ ನಿಯಂತ್ರಣ ತಪ್ಪಿ ನೇಪಾಳದ ಮುಗು ಜಿಲ್ಲೆಯಗಮ್ಗಾಧಿ ಬಳಿ ನದಿಗೆ ಬಿದ್ದು ಅದರಲ್ಲಿರುವ ಬಹುತೇಕ ಪ್ರಯಾಣಿಕರು ಮೃತಪಟ್ಟಿದ್ದಾರೆ.

ಬಸ್ ರಸ್ತೆಯಿಂದ ಜಾರಿ 300 ಮೀಟರ್ ಕೆಳಗಿರುವ ನದಿಗೆ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ನೇಪಾಳದ ಗುಂಜ್‌ನಿಂದ ಬಸ್‌ ಗಮ್ಗಾಧಿ ಕಡೆಗೆ ಹೋಗುತ್ತಿತ್ತು. ನಡುವೆ ಛಾಯಾನಾಥ್ ರಾರಾ ಪುರಸಭೆಯ ಪಿನಾ ಜ್ಯಾರಿ ನದಿ ಇತ್ತು. ಈ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿದೆ. ರಸ್ತೆಯಿಂದ ನೇರವಾಗಿ ಬಸ್‌ ನದಿಗೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಅನೇಕ ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.

ಸದ್ಯ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಇನ್ನಷ್ಟು ಸುದ್ದಿ ನಿರೀಕ್ಷಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net