ಬಿಎಸ್‌ವೈ ಚಮಚ ಅಲ್ಲದಿರೋದೇ ದೊಡ್ಡ ಸಮಸ್ಯೆ- ಅದಕ್ಕೇ ಇಲ್ಲಸಲ್ಲದ ಪಿತೂರಿ ಎಂದ ಸುಬ್ರಮಣಿಯನ್‌ ಸ್ವಾಮಿ

subramanian
Published on

ನವದೆಹಲಿ: ಈಗ ದೇಶಾದ್ಯಂತೆ ಕರ್ನಾಟಕ ರಾಜಕೀಯದ್ದೇ ಮಾತು. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ಸಲ್ಲಿಸುವ ವಿಚಾರ ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ನಾಯಕತ್ವ ಬದಲಾವಣೆ ಸುದ್ದಿ ವಿವಿಧ ರೂಪ ತಳೆಯುತ್ತಿದೆ.

ರಾಜ್ಯದ ಲಿಂಗಾಯತ ಸಮುದಾಯದ ನಾಯಕರು, ಮಠಾಧೀಶರು ಮುಖ್ಯಮಂತ್ರಿ ಪರವಾಗಿ ನಿಂತಿದ್ದು ಅವರ ಪರವಾಗಿ ಹೇಳಿಕೆ ನೀಡಿದ್ದರೆ, ಇದೀಗ ಕೇಂದ್ರದ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಕೂಡ ಬಿಜೆಪಿ ಹೈಕಮಾಂಡ್ ನಾಯಕರಿಗೆ ಎಚ್ಚರಿಕೆಯ ಟ್ವೀಟ್ ಮಾಡಿದ್ದಾರೆ.

ಸಿಎಂ ಯಡಿಯೂರಪ್ಪ ಅವರನ್ನ ಏಕೆ ಕುರ್ಚಿಯಿಂದ ಇಳಿಸಬೇಕು ಎಂದು ಪ್ರಶ್ನಿಸಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಯನ್ನು ಮೊದಲು ಅಧಿಕಾರಕ್ಕೆ ತಂದವರು ಯಡಿಯೂರಪ್ಪ, ಅವರು ಇತರ ನಾಯಕರಿಗೆ ಚಮಚ ಆಗದೇ ಕೆಲಸ ಮಾಡುತ್ತಿರುವುದೇ ಅವರಿಗೆ ಕಷ್ಟವಾಗುತ್ತಿದೆ. ಇದೇ ಕಾರಣಕ್ಕೆ ಅವರನ್ನು ತೆಗೆದು ಹಾಕಲು ಸಂಚು ನಡೆಯುತ್ತಿದೆ. ಅವರನ್ನು ಕಂಡರೆ ಆಗದವರೇ ಈ ಕೆಲಸ ಮಾಡಿಸುತ್ತಿರುವುದು ಎಂದಿದ್ದಾರೆ.

ರಾಜ್ಯದಲ್ಲಿ ಯಡಿಯೂರಪ್ಪ ಇಲ್ಲದೇ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೆ ಸಾಧ್ಯವಿಲ್ಲ. ಪಕ್ಷ ಬಿಟ್ಟು ಹೋಗಿದ್ದ ಅವರು ವಾಪಸ್ ಆದ ನಂತರವೇ ರಾಜ್ಯದಲ್ಲಿ ಪಕ್ಷವನ್ನು ಗೆಲ್ಲಿಸುವುದಕ್ಕೆ ಸಾಧ್ಯವಾಯಿತು. ಅದು ತಿಳಿದಿದ್ದರೂ ಕೂಡ ಈ ಹಿಂದಿನ ತಪ್ಪನ್ನೇ ಏಕೆ ಪುನರಾವರ್ತಿಸಬೇಕು," ಎಂದು ಸುಬ್ರಮಣಿಯನ್ ಸ್ವಾಮಿ ಪ್ರಶ್ನೆ ಚಾಟಿ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net