ಪಾಕ್​ ಗಡಿಯಿಂದ ಭಾರತಕ್ಕೆ ನುಸುಳಿತು ಡ್ರಗ್ಸ್​! ವಶಕ್ಕೆ ಪಡೆದ ಯೋಧರು

drugs
Published on

ಜಮ್ಮು: ಪಾಕಿಸ್ತಾನ- ಭಾರತ ಅಂತಾರಾಷ್ಟ್ರೀಯ ಗಡಿಯಲ್ಲಿ ನುಸುಳಿ ಬರುತ್ತಿದ್ದ ಡ್ರಗ್ಸ್​ ಹಾಗೂ ಪಿಸ್ತೂಲ್​ಗಳನ್ನು ಬಾರ್ಡರ್ ಸೆಕ್ಯುರಿಟಿ ಫೋರ್ಸ್ (ಬಿಎಸ್ಎಫ್) ಯೋಧರು ವಶಕ್ಕೆ ಪಡೆದಿದ್ದಾರೆ.

58 ಪ್ಯಾಕೆಟ್​ಗಳ ಮಾದಕ ದ್ರವ್ಯ ಹಾಗೂ ಎರಡು ಪಿಸ್ತೂಲ್​ಗಳನ್ನು ಗಡಿಯ ಮೂಲಕ ಭಾರತಕ್ಕೆ ನುಸುಳುವ ಪ್ರಯತ್ನ ಮಾಡಲಾಗಿತ್ತು. ಇದರ ಬಗ್ಗೆ ಮಾಹಿತಿ ಕಲೆ ಹಾಕಿದ ಯೋಧರು ಅವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಗಡಿ ಕಾವಲು ಪಡೆಯ ಅಧಿಕಾರಿಗಳು ಹೇಳಿದ್ದಾರೆ.

ಆರ್ ಎಸ್ ಪುರ ಸೆಕ್ಟರ್‌ನ ಅರ್ನಿಯಾ ಪ್ರದೇಶದಲ್ಲಿ ಶನಿವಾರ ಮತ್ತು ಭಾನುವಾರದ ಮಧ್ಯರಾತ್ರಿಯಲ್ಲಿ ಕಳ್ಳಸಾಗಾಣಿಕೆದಾರರು ಇಂಥ ಕುಕೃತ್ಯಕ್ಕೆ ಕೈಹಾಕಿದ್ದರು. ಅದನ್ನು ತಡೆಗಟ್ಟುವಲ್ಲಿ ಯೋಧರು ಯಶಸ್ವಿಯಾಗಿದ್ದಾರೆ ಎಂದು ರರ ಒಳನುಸುಳುವಿಕೆ ಬಿಡ್ ಅನ್ನು ತಡೆಹಿಡಿಯಲಾಗಿದೆ ಎಂದಿದ್ದಾರೆ.

ಬುಧ್ವಾರ್ ಮತ್ತು ಬುಲೆಚಕ್ ಪ್ರದೇಶಗಳಲ್ಲಿ ಇರುವ ಸೇನಾಪಡೆ ಅಂತಾರಾಷ್ಟ್ರಿಯ ಗಡಿಯ ಕೆಲವು ಪಾಕಿಸ್ತಾನಿಗಳು ಅನುಮಾನಾಸ್ಪದವಾಗಿ ಚಲಿಸುತ್ತಿರುವುದನ್ನು ಗಮನಿಸಿದ್ದಾರೆ. ಅವರ ಮೇಲೆ ನಿಗಾ ವಹಿಸಲಾಗಿತ್ತು. ಅದೇ ವೇಳೆ ಕಾರ್ಯಾಚರಣೆ ನಡೆಸಿದ್ದ ಯೋಧರು ಗುಂಡು ಹಾರಿಸಿದ್ದರು. ಈ ಸಂದರ್ಭದಲ್ಲಿ ಕಳ್ಳಸಾಗಣೆದಾರರು ಅಲ್ಲಿಂದ ಕಾಲ್ಕಿತ್ತಿದ್ದರು.

ನಸುಕಿನ ವೇಳೆ ಸ್ಥಳವನ್ನು ಪರಿಶೀಲನೆ ಮಾಡಿದಾಗ, ಡ್ರಗ್ಸ್​, ಕೆಲವು ಪತ್ರಿಕೆಗಳು ಹಾಗೂ ಪಿಸ್ತೂಲ್​ಗಳು ಅಲ್ಲಿ ಇರುವುದು ತಿಳಿದುಬಂದಿದೆ. ಇವುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net