ಪಕ್ಕದಲ್ಲಿ ಮದುಮಗನಿರುವಾಗ್ಲೇ ಕ್ಯಾಮೆರಾದತ್ತ ಮದುಮಗಳ ಸಿಗ್ನಲ್‌ ಪಾಸ್‌- ವಿಡಿಯೋ ವೈರಲ್‌

viral
Published on

ನವದೆಹಲಿ: ಮದುವೆ ಸಮಾರಂಭವೊಂದಲ್ಲಿ ಮದುಮಗಳೊಬ್ಬರು ಕಣ್‌ಸನ್ನೆ ಮಾಡಿರುವ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.

ವಧು ಕ್ಯಾಮೆರಾ ನೋಡಿಕೊಂಡು ಒಂದು ಸನ್ನೆ ಮಾಡಿ ಸಿಗ್ನಲ್ ಪಾಸ್ ಮಾಡಿದ್ದಾರೆ. ವಿನ್‌ ಎಂದು ಸೂಚಿಸುವಂತೆ ಎರಡು ಬೆರಳಗಳನ್ನು ತೋರಿಸಿ ಕಣ್ಣುಹೊಡೆದು ಸಿಗ್ನಲ್‌ ಒಂದನ್ನು ಪಾಸ್‌ ಮಾಡಿದ್ದಾಳೆ ವಧು. ಈ ಸಿಗ್ನಲ್‌ ಏನು ಎಂಬ ಬಗ್ಗೆ ವಿಡಿಯೋದಲ್ಲಿಯೇ ಬರೆಯಲಾಗಿದೆ. ರಂಗೀಲಾ ಹಿಂದಿ ಚಿತ್ರದ ಹಾಡನ್ನು ಇದಕ್ಕೆ ಸೇರಿಸಲಾಗಿದೆ.

ಈ ವಿಡಿಯೋ ಅನ್ನು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಲಾಗಿದ್ದು, ಇದೀಗ ಭಾರಿ ವೈರಲ್‌ ಆಗಿದ್ದು, ಕರೊನಾದ ಈ ದಿನಗಳಲ್ಲಿ ಮನಸ್ಸಿಗೆ ಮುದ ನೀಡುತ್ತದೆ ಎಂದು ಕಮೆಂಟಿಗರು ಬರೆದಿದ್ದಾರೆ.

ಇದು ಎಲ್ಲಿಯ ವಿಡಿಯೋ, ಇದನ್ನು ಮಾಡಿದವರು ಯಾರು, ಈ ವಧು ಯಾರು ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೂ ಮೆಚ್ಚುಗೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net