More

    ಮೂರನೆಯ ಅಲೆಗೆ ಮಕ್ಕಳೇ ಟಾರ್ಗೆಟ್ಟಾ? ಕರೊನಾ ನಿರ್ವಹಣೆ ತಂಡದ ತಜ್ಞ ಇಲ್ಲಿ ವಿವರಿಸಿದ್ದಾರೆ ನೋಡಿ…

    ನವದೆಹಲಿ: ಕರೊನಾ ಎರಡನೆಯ ಅಲೆ ಜನಜೀವನವನ್ನು ಅಲ್ಲೋಲ ಕಲ್ಲೋಲ ಮಾಡಿರುವ ನಡುವೆಯೇ ಮೂರನೆಯ ಅಲೆಯ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಮೂರನೆಯ ಅಲೆ ಮಕ್ಕಳನ್ನು ಬಾಧಿಸುತ್ತವೆ, ಅವರ ಜೀವಕ್ಕೆ ಕುತ್ತು ತರುತ್ತದೆ ಎಂದು ಇದಾಗಲೇ ಸಾಮಾಜಿಕ ಜಾಲತಾಣವೂ ಸೇರಿದಂತೆ ಹಲವರು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾರೆ. ಈ ವಿಷಯವನ್ನು ಕೇಳಿಯೇ ಹಲವರು ಖಿನ್ನತೆಗೆ ಜಾರುತ್ತಿದ್ದಾರೆ.

    ಇದೀಗ ಈ ವಿಷಯದ ಬಗ್ಗೆ ಸ್ಪಷ್ಟಪಡಿಸಿರುವ ಕರೊನಾ ನಿರ್ವಹಣೆ ತಂಡದ ಸದಸ್ಯ ಡಾ.ವಿ.ಕೆ.ಪೌಲ್ ಒಂದು ಒಳ್ಳೆಯ ಸುದ್ದಿಯನ್ನು ಹೇಳಿದ್ದಾರೆ. ಅದೇನೆಂದರೆ ಕರೊನಾ 3ನೇ ಅಲೆ ಮಕ್ಕಳನ್ನು ಬಾಧಿಸುವ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಅವರು ಹೇಳಿದ್ದಾರೆ.

    ಎರಡನೆಯ ಅಲೆಗಿಂತಲೂ ಮೂರನೆಯ ಅಲೆಯ ಬಗ್ಗೆ ಜನರು ಅದರಲ್ಲಿಯೂ ಪಾಲಕರು ಹೆಚ್ಚು ಚಿಂತಿತರಾಗಿದ್ದಾರೆ. ಆದರೆ ಇದು ನೇರವಾಗಿ ಮಕ್ಕಳ ಮೇಲೆಯೇ ಪರಿಣಾಮ ಬೀರಲಿದೆ ಎಂಬುದು ಇದುವರೆಗೂ ಖಚಿತವಾಗಿಲ್ಲ. ಮೊದಲ ಮತ್ತು ಎರಡನೆಯ ಅಲೆಯಲ್ಲಿ ಕೆಲ ಮಕ್ಕಳಿಗೂ ಸೋಂಕು ತಗುಲಿವೆ. ಅದರಂತೆಯೇ ಮೂರನೆಯ ಅಲೆ ಕೂಡ. ಆದರೆ ಇದು ನಿರ್ದಿಷ್ಟವಾಗಿ ಮಕ್ಕಳ ಮೇಲೆಯೇ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಯಾವುದೇ ಪುರಾವೆಗಳು ಇದುವರೆಗೆ ದೊರೆತಿಲ್ಲ ಎಂದಿದ್ದಾರೆ.

    ದೆಹಲಿಯ ಏಮ್ಸ್ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಕೂಡ ಮೂರನೆಯ ಅಲೆಯ ಬಗ್ಗೆ ಮಾತನಾಡಿದ್ದು, ಮೂರನೇ ಅಲೆಯಲ್ಲಿ ಮಕ್ಕಳಗೆ ಸೋಂಕು ಹೆಚ್ಚು ಕಾಣಿಸಿಕೊಳ್ಳುತ್ತದೆ ಎಂಬುದರ ಬಗ್ಗೆ ಯಾವುದೇ ದೃಢೀಕೃತ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ. ಈ ನಡುವೆಯೇ, ಕರೊನಾ ಲಸಿಕೆಯನ್ನು ಮಕ್ಕಳಿಗೂ ನೀಡುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

    ಆಗ ಅಜಯ್‌- ಶಿಖಾ… ಈಗ ಗೌತಮ್‌- ಅಶ್ವತಿ: ಇದು ಮೈಸೂರು- ಮಂಡ್ಯ ಜಿಲ್ಲಾಧಿಕಾರಿಗಳ ವಿಶೇಷತೆ!

    ಸಂಸದೆಗೆ ಟೈಟ್‌ ಪ್ಯಾಂಟ್‌ ತಂದ ಫಜೀತಿ- ಸಂಸತ್ತಿನ ಒಳಗೆ ಹೋಗ್ತಿದ್ದಂತೆಯೇ ಶುರುವಾಯ್ತು ಪ್ರತಿಭಟನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts