More

    ಶ್ರದ್ಧೆಯಿಂದ ಕಲಿತರೆ ಒಲಿಯುತ್ತದೆ ಸಂಗೀತ

    ಶಿವಮೊಗ್ಗ: ನಿರಂತರ ಪರಿಶ್ರಮದಿಂದ ಅಭ್ಯಾಸ ಮಾಡುವುದು, ಛಲ, ಏಕಾಗ್ರತೆಯಿಂದ ಕೆಲಸ ಮಾಡುವುದರಿಂದ ಸಾಧನೆಯ ಹಾದಿಯಲ್ಲಿ ಮುನ್ನಡೆಯಬಹುದು ಎಂದು ಗಾಯಕ ಭದ್ರಾವತಿ ವಾಸು ಹೇಳಿದರು.

    ವಿನೋಬನಗರದಲ್ಲಿ ಮಂಗಳವಾರ ಜೇನುಗೂಡು ಸಿಂಗರ್ಸ್‌ ಗ್ರೂಪ್ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಕಡಿಮೆ ಅವಧಿಯಲ್ಲಿ ಕಲಾವಿದರಾಗಬೇಕು. ಖ್ಯಾತಿ ಗಳಿಸಬೇಕೆಂಬ ಮನೋಭಾವ ಕೆಲವರದ್ದು. ಹೀಗಾಗಿ ರಿಯಾಲಿಟಿ ಶೋ ಬೆನ್ನುಬಿದ್ದಿದ್ದಾರೆ. ಒಳ್ಳೆಯ ಗುರುಗಳ ಬಳಿ ಅಭ್ಯಾಸ ಮಾಡಿ ಶ್ರದ್ಧೆಯಿಂದ ಕಲಿತರೆ ಸಂಗೀತ ಒಲಿಯುತ್ತದೆ ಎಂದು ತಿಳಿಸಿದರು.
    ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಮಾತನಾಡಿ, ಸಂಗೀತ ಸಾಧಕನ ಸ್ವತ್ತು. ಸಂಗೀತದಿಂದ ಖಿನ್ನತೆ ದೂರವಾಗುತ್ತದೆ. ಸದಾ ಲವಲವಿಕೆಯಿಂದ ಇರುವಂತೆ ಮಾಡುತ್ತದೆ. ಬಾಲ್ಯದಲ್ಲಿಯೇ ಮಕ್ಕಳಿಗೆ ಸಂಗೀತದ ಆಸಕ್ತಿ ಬೆಳೆಸಬೇಕು ಎಂದು ಹೇಳಿದರು.
    ಜೇನುಗೂಡು ಸಿಂಗರ್ಸ್‌ ಗ್ರೂಪ್ ಗೌರವಾಧ್ಯಕ್ಷ ಎಸ್.ಡಿ.ವಿರೂಪಾಕ್ಷಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದು ಉತ್ತಮ ಕೆಲಸ. ಉದಯೋನ್ಮುಖ ಕಲಾವಿದರು ಆಸಕ್ತಿಯಿಂದ ನಮ್ಮ ವೇದಿಕೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
    ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಶಿವರಾಜ್, ಜೇನುಗೂಡು ಸಿಂಗರ್ಸ್‌ ಗ್ರೂಪ್ ಅಧ್ಯಕ್ಷ ಸಂಜಯ್, ಖಜಾಂಚಿ ಆಶಾ ಹಿರೇಮಠ್, ಉಪಾಧ್ಯಕ್ಷ ಸರ್ವೇಶ್ವರ್, ಪ್ರಮುಖರಾದ ಶೋಭಾ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts