VIDEO: ಅಬ್ಬಬ್ಬಾ ವಧುವಿಗೆ ಇದೆಂಥ ಸಿಟ್ಟು ನೋಡಿ... ವರನ ಬಾಯಲ್ಲಿ ಸ್ವೀಟ್‌ ಇಟ್ಟು ಎಸೆದೇ ಬಿಟ್ಟಳು!

bride
Published on

ಮದುವೆ ಮಂಟಪದಲ್ಲಿಯೇ ವರನ ಮೇಲೆ ಭಾರಿ ಸಿಟ್ಟುಮಾಡಿಕೊಂಡ ವಧುವು, ಆತನಿಗೆ ತಿನ್ನಿಸುತ್ತಿರುವ ಸಿಹಿಯನ್ನೇ ಎಸೆದಿರುವ ಘಟನೆಯೊಂದು ಇದೀಗ ಸಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.

ಇದರ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಪಾಪ! ಈಗಲೇ ಹೀಗಾದರೆ ಮುಂದೆ ಆ ಗಂಡನ ಗತಿಯೇನು ಎಂದು ಕಮೆಂಟಿಗರು ತಮಾಷೆ ಮಾಡುತ್ತಿದ್ದರೆ, ಪಾಪ ಮದುವೆಗೆ ಇಷ್ಟವಿಲ್ಲದ ಹಾಗೆ ಕಾಣುವ ಆ ವರನನ್ನು ಕಟ್ಟಿಕೊಂಡು ಈ ಯುವತಿಯ ಪಾಡೇನು ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಈ ಘಟನೆ ನಡೆದಿರುವುದು ಎಲ್ಲಿ ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಒಬ್ಬೊಬ್ಬರು ಒಂದೊಂದು ಊರಿನ ಹೆಸರನ್ನು ಹೇಳುತ್ತಿದ್ದಾರೆ.

ನಿಜವಾಗಿಯೂ ವಧು ಇಷ್ಟೆಲ್ಲಾ ಕೋಪ ಮಾಡಿಕೊಂಡದ್ದು ಏಕೆ ಎಂಬ ಬಗ್ಗೆ ನಿಖರ ಕಾರಣಗಳು ಯಾರಿಗೂ ಗೊತ್ತಿಲ್ಲ. ಆದರೆ ವಿಡಿಯೋ ನೋಡಿದರೆ ತಿಳಿಯುವುದು ಇಷ್ಟೇ. ಮದುವೆ ನಡೆಯುತ್ತಿದ್ದು, ವೇದಿಕೆಯ ಮೇಲೆ ವಧು-ವರ ಇಬ್ಬರೂ ನಿಂತಿದ್ದಾರೆ. ಮದುವೆಯ ಸಂಪ್ರದಾಯದಂತೆ ವರನಿಗೆ ಸಿಹಿ ತಿನಿಸಲು ಹಿರಿಯರು ಹೇಳುತ್ತಿದ್ದಂತೆಯೇ ಮದುಮಗಳು ಸಿಹಿಯನ್ನು ತಂದು ವರನಿಗೆ ತಿನ್ನಿಸಲು ಮುಂದಾಗಿದ್ದಾಳೆ. ಆದರೆ ಯಾಕೋ ಅದನ್ನು ತಿನ್ನಲು ವರ ಹಿಂಜರಿದಿದ್ದಾನೆ. ಅಷ್ಟೇ.

ಇದರಿಂದ ಸಿಟ್ಟುಗೊಂಡ ವಧು ಅಲ್ಲಿಯೇ ಅದನ್ನು ಎಸೆದು ಕೈ ಒರೆಸಿಕೊಂಡಿದ್ದಾಳೆ. ಇದನ್ನು ಯೂಟ್ಯೂಬ್ ಇಂಡಿಯಾ ಎಂಬ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದೆ.

ನೀವೂ ನೋಡಿ ಈ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net