

ಬೆತುಲ್ (ಮಧ್ಯಪ್ರದೇಶ): ಮದುಮಗಳೊಬ್ಬಳು ಟ್ರ್ಯಾಕ್ಟರ್ ಓಡಿಸಿಕೊಂಡು ಕಲ್ಯಾಣ ಮಂಟಪಕ್ಕೆ ಬಂದು ಗಮನ ಸೆಳೆದಿರುವ ಘಟನೆ ಮಧ್ಯಪ್ರದೇಶದ ಬೆತುಲ್ನಲ್ಲಿ ನಡೆದಿದೆ.
ಮೇ. 25ರಂದು ನಡೆದ ಮದುವೆ ಸಮಾರಂಭದಲ್ಲಿ ವಧು ಟ್ರ್ಯಾಕ್ಟರ್ ಏರಿ ಬಂದಿದ್ದಾಳೆ. ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ಜವ್ರಾ ಗ್ರಾಮದ ನಿವಾಸಿ ಭಾರತಿ ತಾಗ್ಡೆ ಹೀಗೆ ಟ್ರ್ಯಾಕ್ಟರ್ ಏರಿ ಬಂದವರು . ಇದರ ವಿಡಿಯೋ ಭಾರಿ ವೈರಲ್ ಆಗಿದ್ದು, ಹಲವಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉದ್ಯಮಿ ಆನಂದ್ ಮಹೀಂದ್ರಾ ಕೂಡ ಇದನ್ನು ಮನಸಾರೆ ಕೊಂಡಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಆನಂದ ಮಹೀಂದ್ರಾ, 'ವಧು ಭಾರತಿ ಡ್ರೈವಿಂಗ್ ಸ್ವರಾಜ್' ಎಂದು ಟ್ವೀಟ್ ಮಾಡಿದ್ದು, Brand Makes Sense... ಎಂದು ಬರೆದುಕೊಂಡಿದ್ದಾರೆ. ಮಹೀಂದ್ರಾ ಅವರು ಹೀಗೆ ಟ್ವೀಟ್ ಮಾಡುವುದಕ್ಕೆ ಕಾರಣ, ವಧು ಓಡಿಸಿಕೊಂಡು ಬಂದಿರುವ ಟ್ರ್ಯಾಕ್ಟರ್ ಆನಂದ್ ಮಹೀಂದ್ರಾ ಕಂಪೆನಿಗೆ ಸೇರಿದ್ದು.
ಕಳೆದ ಕೆಲ ದಿನಗಳ ಹಿಂದೆ ಯುವತಿಯೊಬ್ಬಳು ಕಲ್ಯಾಣ ಮಂಟಪಕ್ಕೆ ಕುದುರೆ ಏರಿ ಬಂದು ಎಲ್ಲರ ಗಮನ ಸೆಳೆದಿದ್ದಳು. ಈ ಘಟನೆ ಕೂಡ ಮಧ್ಯಪ್ರದೇಶದ ಬೆತುಲ್ದಲ್ಲಿ ನಡೆದಿತ್ತು.
ವಿಡಿಯೋ ಇಲ್ಲಿದೆ ನೋಡಿ: