ವಧುವಿನ ಡ್ರೆಸ್‌ನಲ್ಲಿ ಕಾಲೇಜಿನ ಪರೀಕ್ಷೆ ಬರೆದು ಓಡೋಡಿ ಮಂಟಪಕ್ಕೆ ಹೋಗಿ ತಾಳಿ ಕಟ್ಟಿಸಿಕೊಂಡ ವಧು!

Bride
Published on

ಸೌರಾಷ್ಟ್ರ ​(ಗುಜರಾತ್​): ಕಾಲೇಜು ಕಲಿಯುತ್ತಿರುವ ವಿದ್ಯಾರ್ಥಿನಿಯೊಬ್ಬಳಿಗೆ ಮದುವೆ ನಿಗದಿಯಾದ ದಿನವೇ ಪರೀಕ್ಷೆಯೂ ಇದ್ದುದರಿಂದ ವಧುವಿನ ಬಟ್ಟೆಯಲ್ಲಿಯೇ ಕಾಲೇಜಿಗೆ ಬಂದು ಪರೀಕ್ಷೆ ಬರೆದು, ನಂತರ ಕೂಡಲೇ ಮಂಟಪಕ್ಕೆ ಹೋಗಿ ಮದುವೆಯಾಗಿರುವ ಘಟನೆ ಗುಜರಾತಿನ ಸೌರಾಷ್ಟ್ರದಲ್ಲಿ ನಡೆದಿದೆ.

ವಧುವಿನ ದಿರಿಸಾಗಿರುವ ಲೆಹಂಗಾ ಹಾಕಿಕೊಂಡು, ಮೈಮೇಲೆ ಆಭರಣ ಧರಿಸಿಕೊಂಡು ವಧುವಿನ ಶೃಂಗಾರದಲ್ಲಿಯೇ ಭಾವಿ ಪತಿಯೊಂದಿಗೆ ಕಾಲೇಜಿಗೆ ಬಂದ ವಧು ಶಿವಾಂಗಿ ಭಕ್ತರಿಯಾ, ನಂತರ ಪರೀಕ್ಷೆ ಬರೆದಿದ್ದು, ಇದರ ಫೋಟೋ ಭಾರಿ ವೈರಲ್‌ ಆಗಿದೆ.

ಸೌರಾಷ್ಟ್ರ ವಿಶ್ವವಿದ್ಯಾಲಯದಲ್ಲಿ ವಿವಿಧ ಕಾಲೇಜು​​ಗಳ ಪರೀಕ್ಷೆಗಳು 23ರ ಮಂಗಳವಾರದಿಂದ ಆರಂಭವಾಗಿವೆ. ಇಲ್ಲಿಯೇ ಬಿಎಸ್​ಡಬ್ಲೂ ವ್ಯಾಸಂಗ ಮಾಡುತ್ತಿರುವ ಶಿವಾಂಗಿ 5ನೇ ಸೆಮಿಸ್ಟರ್​​​ ಓದುತ್ತಿದ್ದಳು. ಮದುವೆ ಮತ್ತು ಕಾಲೇಜು ಒಂದೇ ದಿನ ಇದ್ದುದರಿಂದ ಮೊದಲು ಪರೀಕ್ಷೆ ಬರೆದು ಪರೀಕ್ಷೆ ಮುಗಿಯುತ್ತಿದ್ದಂತೆಯೇ ಮಂಟಪಕ್ಕೆ ಧಾವಿಸಿ ಮದುವೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net