

ಲುಧಿಯಾನಾ (ಪಂಜಾಬ್): ಪಂಜಾಬ್ನ ಲುಧಿಯಾನಾದ ನ್ಯಾಯಾಲಯದಲ್ಲಿ ಸ್ಫೋಟ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಹಲವರಿಗೆ ಗಾಯಗಳಾಗಿವೆ.
ಕೋರ್ಟ್ನ ಎರಡನೇ ಮಹಡಿಯಲ್ಲಿ ಸ್ಫೋಟ ಸಂಭವಿಸಿದ್ದು, ವಾಹನಗಳ ಪಾರ್ಕಿಂಗ್ ಜಾಗ ಸಂಪೂರ್ಣ ಧ್ವಂಸಗೊಡಿದೆ. ಆರು ಮಹಡಿಗಳ ಕೋರ್ಟ್ ಕಟ್ಟಡ ಇದಾಗಿದೆ. ಎರಡನೇ ಮಹಡಿಯಲ್ಲಿರುವ ವಾಶ್ ರೂಂನಲ್ಲಿ ಸ್ಫೋಟಗೊಂಡಿರುವುದಾಗಿ ತಿಳಿದುಬಂದಿದೆ.
ಸ್ಫೋಟದಿಂದ ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಇದರ ವಿಡಿಯೋ ಮಾಡಿದ್ದು, ಅದೀಗ ವೈರಲ್ ಆಗಿದೆ. ಕಟ್ಟಡದಿಂದ ಹೊಗೆ ಬರುತ್ತಿರುವುದನ್ನು ಇದರಲ್ಲಿ ನೋಡಬಹುದಾಗಿದೆ. ಇದೊಂದು ಪ್ರಬಲ ಸ್ಫೋಟವಾಗಿದ್ದು, ಸ್ಫೋಟದ ರಭಸಕ್ಕೆ ಇಡೀ ಕಟ್ಟಡ ನಲುಗಿದೆ ಎಂದು ಜನರು ಹೇಳುತ್ತಿದ್ದಾರೆ.
ಈ ಕೃತ್ಯ ಎಸಗಿದವರು ಯಾರು? ಇದರ ಉದ್ದೇಶ ಏನು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಇನ್ನಷ್ಟೇ ಸತ್ಯಾಂಸ ಹೊರಬರಬೇಕಿದೆ.
ವಿಡಿಯೋ ಇಲ್ಲಿದೆ ನೋಡಿ: