ಮಂಗನಿಂದ ತಪ್ಪಿಸಿಕೊಳ್ಳಲು ಹೋಗಿ ಬಿಜೆಪಿ ಮುಖಂಡನ ಪತ್ನಿಯ ಸಾವು: ಮಹಡಿಯಿಂದ ಜಿಗಿದ ಮಹಿಳೆ

death
Published on

ಶಾಮ್ಲಿ (ಉತ್ತರ ಪ್ರದೇಶ): ಮಂಗಗಳು ಬಂದ ದಾಳಿ ಸಂದರ್ಭದಲ್ಲಿ ಅವುಗಳಿಂದ ತಪ್ಪಿಸಿಕೊಳ್ಳಲು ಹೋಗಿ ಬಿಜೆಪಿ ನಾಯಕ ಅನಿಲ್ ಕುಮಾರ್ ಚೌಹಾಣ್ ಅವರ ಪತ್ನಿ ಸುಷ್ಮಾ ದೇವಿ (50) ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಶಾಮ್ಲಿಯಲ್ಲಿ ನಡೆದಿದೆ.

ಮಂಗಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಅವರು ಎರಡನೇ ಮಹಡಿಯಿಂದ ಕೆಳಗೆ ಹಾರಿಬಿಟ್ಟಿರು. ಕೈರಾನಾ ನಗರದಲ್ಲಿರುವ ತಮ್ಮ ಮನೆಯ ಟೆರೇಸ್​ ಮೇಲೆ ಇದ್ದಾಗ ಮಂಗಗಳು ಏಕಾಏಕಿ ದಾಳಿ ಇಟ್ಟಿದ್ದವು. ಈ ಸಂದರ್ಭದಲ್ಲಿ ಸುಷ್ಮಾ ಅವರು ಟೆರೇಸ್​ನಿಂದ ಕೆಳಗೆ ಜಿಗಿದಿದ್ದಾರೆ. ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.

ಉತ್ತರ ಪ್ರದೇಶದ ಹಲವು ಪಶ್ಚಿಮದ ಜಿಲ್ಲೆಗಳಲ್ಲಿ ಮಂಗಗಳ ಕಾಟ ಹೆಚ್ಚಾಗಿದೆ. ಮಥುರಾ ಜಿಲ್ಲೆಯಲ್ಲಿ ಮಂಗಗಳನ್ನು ಹಿಡಿಯುವ ಕಾರ್ಯಾಚರಣೆ ಸೆಪ್ಟೆಂಬರ್ 1ರಿಂದ ಶುರುವಾಗಿದೆ. ನಗರ ಪ್ರಮುಖ ಸ್ಥಳಗಳು ಮತ್ತು ದೇವಸ್ಥಾನಗಳ ಬಳಿ ಇರುವ ಮಂಗಗಳನ್ನು ಹಿಡಿಯುವ ಕೆಲಸವನ್ನು ಮುನ್ಸಿಪಲ್ ಕಾರ್ಪೊರೇಷನ್ ಮಾಡುತ್ತಿದೆ.

ಬಿಜೆಪಿ ನಾಯಕ ಅನಿಲ್ ಕುಮಾರ್ ಚೌಹಾಣ್ ಅವರು ಮಾಜಿ ಸಂಸದ ಕೂಡ ಆಗಿದ್ದು, ದಿವಂಗತ ಹುಕುಂ ಸಿಂಗ್ ಅವರ ಸಂಬಂಧಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net